ಶಕ್ತಿ ನೀಡುವ ದೇವತೆ ದುರ್ಗೆ :ತಹಸೀಲ್ದಾರ್ ಅರ್ಚನಾ ಭಟ್ ಬಣ್ಣನೆ

archana
Published on

ಬಂಟ್ವಾಳ: ನವರಾತ್ರಿ ಉತ್ಸವ ಅಂಗವಾಗಿ ಬಿ.ಸಿ.ರೋಡ್‌ನ ಆಡಳಿತ ಸೌಧದಲ್ಲಿ ಬುಧವಾರ ಆಯುಧ ಪೂಜೆ ನಡೆಯಿತು. ಅರ್ಚಕ ರಾಘವೇಂದ್ರ ಮಯ್ಯರಬೈಲು ಹಾಗೂ ಸಹಾಯಕ ಅರ್ಚಕರು ಪೂಜಾವಿಧಿ ನೆರವೇರಿಸಿದರು.

ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಮಾತನಾಡಿ, ಆರೋಗ್ಯ, ಸಂಪತ್ತು, ನೆಮ್ಮದಿಗಳ ಜತೆ ಎಲ್ಲ್ಲ ಪರಿಸ್ಥಿತಿಗಳನ್ನೂ ಎದುರಿಸಲು ಶಕ್ತಿ ಬೇಕು ಎಂದರು.

ಉಪತಹಸೀಲ್ದಾರ್‌ಗಳಾದ ನರೇದ್ರನಾಥ್ ಮಿತ್ತೂರು, ರಾಜೇಶ್ ನಾಯ್ಕ, ನವೀನ್ ಬೆಂಜನಪದವು, ವಿಜಯ ವಿಕ್ರಮ್, ದಿವಾಕರ ಮುಗಳಿಯ, ಕಂದಾಯ ನಿರೀಕ್ಷಕರಾದ ಜನಾರ್ದನ್.ಜೆ, ವಿಜಯ್ ಆರ್, ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ವಿಷಯ ನಿರ್ವಾಹಕ ವಿಶುಕುಮಾರ್, ತಾಲೂಕು ಕಚೇರಿ ಸಿಬ್ಬಂದಿ, ಗ್ರಾಮ ಆಡಳಿತ ಅಧಿಕಾರಿಗಳು, ಗ್ರಾಮ ಸಹಾಯಕರು, ಸಾರ್ವಜನಿಕರು ಪಾಲ್ಗೊಂಡಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net