

ಕುಶಾಲನಗರ:
ಕುಶಾಲನಗರ ತಾಲೂಕು ವ್ಯಾಪ್ತಿಯಲ್ಲಿ ವಿಜಯದಶವಿ ಹಬ್ಬದ ಅಂಗವಾಗಿ ಆಯುಧ ಪೂಜಾ ಕಾರ್ಯಕ್ರಮ ವಿವಿಧೆಡೆಗಳಲ್ಲಿ ಶುಕ್ರವಾರ ಸಾಮೂಹಿಕವಾಗಿ ಪೂಜಾ ಕೈಂಕರ್ಯ ನೆರವೇರಿಸುವ ಮೂಲಕ ನಡೆದವು.
ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆ ಮತ್ತು ಸಂಚಾರಿ ಪೋಲಿಸ್ ಠಾಣೆ, ಕೂಡಿಗೆ ವಲಯ ಚಾಮುಂಡೇಶ್ವರಿ ವಿದ್ಯುತ್ ಕೇಂದ್ರದ ಅಧಿಕಾರಿ ವರ್ಗ ಮತ್ತು ಸಿಬ್ಬಂದಿ ಸೇರಿದಂತೆ ವಿವಿಧ ಇಲಾಖೆಯವರು ತಮ್ಮ ತಮ್ಮ ಸಿಬ್ಬಂದಿಯೊAದಿಗೆ ಸಾಮೂಹಿಕ ಆಯುಧ ಪೂಜೆ ಶ್ರಧ್ಧಾಭಕ್ತಿಯಿಂದ ನೆರವೇರಿಸಿದರು.
ಕುಶಾಲನಗರ ಗ್ರಾಮಾಂತರ ಪೋಲಿಸ್ ಠಾಣೆಯಲ್ಲಿ ಠಾಣಾಧಿಕಾರಿ ಮೋಹನ್ ರಾಜ್ ವಿಶೇಷ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.
ಈ ಸಂದರ್ಭದಲ್ಲಿ ಡಿ.ವೈ.ಎಸ್.ಪಿ. ನಾರಾಯಣ, ಪೋಲಿಸ್ ವೃತ್ತ ನಿರೀಕ್ಷಕ ರಾಜೇಶ್ ಕೋಟಿಯಾನ್ ಸೇರಿದಂತೆ ಪೋಲಿಸ್ ಸಿಬ್ಬಂದಿ ಆಯುಧ ಪೂಜಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.