

ಮಡಿಕೇರಿ: ಮಡಿಕೇರಿ ಕೊಡವ ಸಮಾಜದ ವತಿಯಿಂದ ಕೈಲ್ ಪೊಳ್ದ್ ಹಬ್ಬದ ಪ್ರಯುಕ್ತ ಸಾಂಕೇತಿಕ ಆಯುದ್ದ ಪೂಜೆಯನ್ನು ಮಂಗಳವಾರ ನೆರವೇರಿಸಲಾಯಿತು.
ಸಮಾಜದ ಸಭಾಂಗಣದಲ್ಲಿ ಕೋವಿಕತ್ತಿಗೆ ಸಮಾಜದ ಅಧ್ಯಕ್ಷ ಮಂಡುವಂಡ ಪಿ.ಮುತ್ತಪ್ಪನವರು ಪೂಜೆಸಲ್ಲಿಸಿದರು. ಕೊಡವ ಜನಾಂಗದ ಮುಖ್ಯ ಹಬ್ಬವಾದ ಕೈಲ್ ಪೋಳ್ದ್ ಆಚರಣೆಯಾಗಿದ್ದು ದೇವರನ್ನು ಪಾರ್ಥಿಸುವ ಮೂಲಕ ಆಯುದ್ದ ಪೂಜೆಸಲ್ಲಿಸಿದರು. ನಂತರ ತೆಂಗಿನ ಕಾಯಿಗೆ ಗುಂಡುಹೊಡೆಯಲಾಯಿತು.
ಈ ಕಾರ್ಯಕ್ರಮದಲ್ಲಿ ಸಮಾಜದ ಉಪಾಧ್ಯಕ್ಷ ಕೇಕಡ ವಿಜುದೇವಯ್ಯ, ಕಾರ್ಯದರ್ಶಿ ಕನ್ನಂಡ ಸಂಪತ್ ಕುಮಾರ್, ಜಂಟಿ ಕಾರ್ಯದರ್ಶಿ ನಂದಿನೆರವಂಡ ದಿನೇಶ್, ನಿರ್ದೇಶಕರಾದ ಕನ್ನಂಡ ಕವಿತ ಬೊಳ್ಳಪ್ಪ, ಬೊಪ್ಪಂಡ ಸರಳಾ ಕರುಂಬಯ್ಯ, ಕಾಂಡೇರ ಲಲ್ಲು ಕುಟ್ಟಪ್ಪ, ನಂದಿನೆರವಂಡ ರವಿಬಸಪ್ಪ, ಕಾಳಚಂಡ ಅಪ್ಪಣ್ಣ, ಶಾಂತೆಯಂಡ ವಿಶಾಲ್ ಕಾರ್ಯಪ್ಪ, ಮೂವೇರ ಜಯರಾಂ,ಪುತ್ತರಿರ ಕರುಣ್ ಕಾಳಯ್ಯ, ಕೊಡವ ಸಮಾಜ ಮತ್ತು ಕೊಡವ ಸೌಹಾರ್ದ ಪತ್ತಿನ ಸಹಕಾರ ಸಂಘ ಹಾಗೂ ಕೊಡವ ವಿದ್ಯಾಧಿಯ ವ್ಯವಸ್ಥಾಪಕರು, ಸಿಬ್ಬಂದಿ ವರ್ಗ ಹಾಜರಿದ್ದರು.