ಆಯುಧಪೂಜೆಯೊಂದಿಗೆ 'ಬೆಂಕಿ'ಯಲ್ಲಿ ಸುಟ್ಟು ಹೋಯ್ತು ಯುವಕನ ಕನಸು...!

Fire
Published on

ಮಂಡ್ಯ: ಕೆ.ಆರ್.ಪೇಟೆ ಪಟ್ಟಣದ ಹಳೇ ಕಿಕ್ಕೇರಿ ರಸ್ತೆಯಲ್ಲಿರುವ ಅನ್ನಪೂರ್ಣೇಶ್ವರಿ ಟೆಂಬರ್ ಅಂಗಡಿಯಲ್ಲಿ ಭಾನುವಾರ ತಡರಾತ್ರಿ ಶಾರ್ಟ್ ಸರ್ಕ್ಯೂಟ್ ಆದ ಪರಿಣಾಮ ಲಕ್ಷಾಂತರ ರೂ ಮೌಲ್ಯದ ಮರ ಹಾಗೂ ಯಂತ್ರೋಪಕರಣಗಳು ಬೆಂಕಿಯಲ್ಲಿ ಸುಟ್ಟು ಹೋಗಿವೆ. ಸ್ವ ಉದ್ಯೋಗದ ಕನಸಿನಲ್ಲಿ ಗಂಗಾಧರ ಎನ್ನುವವರ ಮಾಡಿದ್ದ ಅಂಗಡಿ ಬೆಂಕಿಗಾಹುತಿಯಾಗಿದೆ. ಅಂಗಡಿಯ ಪಕ್ಕದ ಮನೆಯವರು ಅವಘಡದ ಬಗ್ಗೆ ಮಾಲೀಕನಿಗೆ ಮಾಹಿತಿ ನೀಡಿದ್ದಾರೆ. ಕೂಡಲೇ ಆತ ಅಗ್ನಿಶಾಮಕ ದಳದ ಸಿಬ್ಬಂದಿಗೆ ಮಾಹಿತಿ ಮುಟ್ಟಿಸಿ ಬರುವಷ್ಟರಲ್ಲಿ ಅಂಗಡಿ ಬೆಂಕಿಯಿಂದಾಗಿ ಹೊತ್ತಿ ಉರಿಯುತ್ತಿತ್ತು. ಅಗ್ನಿಶಾಮಕ ದಳದ ಠಾಣಾಧಿಕಾರಿ ಶ್ರೀನಿವಾಸರಾವ್ ಹಾಗೂ ಸಿಬ್ಬಂದಿ ಎರಡು ಗಂಟೆ ಕಾರ್ಯಾಚರಣೆ ನಡೆಸಿ ಬೆಂಕಿ ನಂದಿಸಿದರು. ಆಯುಧಪೂಜೆ ಹಬ್ಬ ಮಾಡಿ ಸಂಬಂಧಿಕರು ಹಾಗೂ ಸ್ನೇಹಿತರಿಗೆ ಸಿಹಿ ವಿತರಿಸಿದ ಮಾಲೀಕನ ಕನಸು ಬೆಂಕಿಯಲ್ಲಿಯೇ ಸುಟ್ಟು ಹೋದಂತಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net