

ಮಡಿಕೇರಿ:
ಐರಿ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೆ ಶಾಸಕರ ನಿಧಿಯಿಂದ 25 ಲಕ್ಷ ರೂ. ಅನುದಾನ ನೀಡುವುದಾಗಿ ಮುಖ್ಯಮಂತ್ರಿಗಳ ಕಾನೂನು ಸಲಹೆಗಾರರೂ ಆಗಿರುವ ವಿರಾಜಪೇಟೆ ಶಾಸಕ ಎ.ಎಸ್. ಪೊನ್ನಣ್ಣ ಪ್ರಕಟಿಸಿದ್ದಾರೆ. ಅರಮೇರಿ ಗ್ರಾಮದಲ್ಲಿರುವ ಐರಿ ಸಮಾಜದ ನಿವೇಶನದಲ್ಲಿ ಭಾನುವಾರ ನಡೆದ ಒತ್ತೊರ್ಮೆ ಕೂಟ ಹಾಗೂ ಬೊಡಿ ನಮ್ಮೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದರು.
ತೆಂಗಿನ ಕಾಯಿಗೆ ಗುಂಡು ಹೊಡೆಯುವ ಮೂಲಕ ಬೊಡಿ ನಮ್ಮೆಗೆ ಚಾಲನೆ ನೀಡಿ ಮಾತನಾಡಿದ ಅವರು, ಐರಿ ಜನಾಂಗ ಬುದ್ಧಿವಂತರೂ, ಪ್ರಜ್ಞಾವಂತರೂ ಆಗಿದ್ದು, ಆದ್ದರಿಂದಲೇ ಕೊಡಗಿನ ಸಂಸ್ಕೃತಿಗೆ ಅವರ ಕೊಡುಗೆ ಅಪಾರವಾಗಿದೆ. ಐರಿ ಜನಾಂಗ ಸ್ವಂತ ಸಾಮರ್ಥ್ಯದಿಂದ ಜಾಗ ಖರೀದಿಸಿ ಸಮಾಜ ಕಟ್ಟಲು ಮುಂದಾಗಿರುವುದು ಪ್ರಶಂಸಾರ್ಹ. ಈ ಸಮಾಜ ಕಟ್ಟಲು 25 ಲಕ್ಷ ರೂ. ಅನುದಾನ ನೀಡಲಾಗುವುದು. ಆರ್ಥಿಕ ಸಮಾನತೆ ಬಂದಾಗ ಮಾತ್ರ ಅಂಬೇಡ್ಕರ್ ಪ್ರತಿಪಾದಿಸಿದ ಸಮಾನತೆಗೆ ಅರ್ಥ ಬರುತ್ತದೆ. ಕೊಡಗಿನಲ್ಲಿ ಕೊಡವ ಭಾಷೆ ಮಾತನಾಡುವ ಎಲ್ಲರನ್ನೂ ಒಗ್ಗೂಡಿಸಿದರೂ ಅವರ ಸಂಖ್ಯೆ ಬಹಳ ಕಡಿಮೆ ಇದೆ. ಆದರೆ ದೇಶಕ್ಕೆ ನೀಡಿದ ಕೊಡುಗೆ ವಿಚಾರದಲ್ಲಿ ಬಹಳ ದೊಡ್ಡ ಪಾತ್ರವಿದೆ ಎಂದರು.
ವಿಧಾನ ಪರಿಷತ್ ಸದಸ್ಯ ಸುಜಾ ಕುಶಾಲಪ್ಪ ಮಾತನಾಡಿ ಐರಿ ಸಮಾಜದಲ್ಲಿ ತಮ್ಮ ಶಾಸಕರ ನಿಧಿಯಿಂದ 10 ಲಕ್ಷ ರೂ. ಅನುದಾನ ನೀಡುವುದಾಗಿ ಭರವಸೆ ನೀಡಿದರು. ಸಮಾಜದಲ್ಲಿ ಹಿಂದುಳಿದ ಸಮಾಜಗಳಿಗೆ ನೆರವು ನೀಡಲು ಬದ್ಧವಾಗಿರುವುದಾಗಿ ಹೇಳಿದ ಅವರು ತಲೆ ಇದ್ದವನು ಮಾತ್ರ ಮನೆ ಕಟ್ಟುವುದು ಎಂದು ಬಣ್ಣಿಸುವ ಮೂಲಕ ಐರಿ ಜನಾಂಗ ಐನ್ ಮನೆ ಕಟ್ಟುತ್ತಿದ್ದ ಸೃಜನಶೀಲತೆಯನ್ನು ಪ್ರಶಂಸಿಸಿದರು. ಇದೇ ಸಂದರ್ಭ ಐರಿ ಸಮಾಜದ ವಿವಿಧ ಬೇಡಿಕೆಗಳ ಮನವಿ ಪತ್ರವನ್ನು ಇಬ್ಬರು ಶಾಸಕರಿಗೆ ಸಲ್ಲಿಸಲಾಯಿತು.
ಐರಿ ಜನಾಂಗದ ಒತ್ತೊರ್ಮೆ ಕೂಟದ ಅಂಗವಾಗಿ ರಾಜ್ಯ ಪ್ರಶಸ್ತಿ ವಿಜೇತ ಶಿಕ್ಷಕಿ ತಟ್ಟಂಡ ನಳಿನಿ, ಮುಖ್ಯಮಂತ್ರಿಗಳ ಚಿನ್ನದ ಪದಕ ವಿಜೇತ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬೊಳ್ಳನಮಂಡ ಉತ್ತಪ್ಪ ಹಾಗೂ ವಿರಾಜಪೇಟೆ ಸರ್ಕಾರಿ ಆಸ್ಪತ್ರೆ ವೈದ್ಯೆ ಅಣ್ಣಾಳಪಂಡ ಕಲ್ಪಿತಾ ಅಜಿತ್ ಅವರನ್ನು ಸನ್ಮಾನಿಸಲಾಯಿತು.
ಪುರುಷರಿಗೆ ಮತ್ತು ಮಹಿಳೆಯರಿಗೆ ಪಾಯಿಂಟ್ 22 ಬಂದೂಕಿನಲ್ಲಿ ತೆಂಗಿನ ಕಾಯಿಗೆ ಗುಂಡು ಹೊಡೆಯುವ ಸ್ಪರ್ಧೆ ಏರ್ಪಡಿಸಲಾಗಿತ್ತು. ಪುರುಷರ ವಿಭಾಗದಲ್ಲಿ ಐನತಂಡ ಹರೀಶ್ ಪ್ರಥಮ ಸ್ಥಾನ ಪಡೆದರೆ, ಅಂಜಪAಡ ಪುರುಷೋತ್ತಮ್ ದ್ವಿತೀಯ ಹಾಗೂ ಐಮಂಡ ಸುರೇಶ್ ಸೋಮಯ್ಯ ತೃತೀಯ ಬಹುಮಾನ ಗಳಿಸಿದರು. ಮಹಿಳೆಯರ ವಿಭಾಗದಲ್ಲಿ ಬೊಳ್ಳನಮಂಡ ಜಯಶ್ರೀ ಸೋಮಯ್ಯ ಮತ್ತು ದುಗ್ಗಂಡ ಹರಿಣಿ ಪ್ರಥಮ ಬಹುಮಾನ ಹಂಚಿಕೊAಡರು.
ಮಹಿಳೆಯರಿಗೆ ಬಾಂಬ್ ಇಂದ ಸಿಟಿ ಸ್ಪರ್ಧೆಯಲ್ಲಿ ಐಮಂಡ ಪೂವಮ್ಮ ಪ್ರಥಮ ಸ್ಥಾನ ಪಡೆದರೆ, ಅಮ್ಮಣಂಡ ಶಾಂತಿ ದ್ವಿತೀಯ ಸ್ಥಾನ, ಹಾಗೂ ಅನ್ಬಂವಿರ ಪುಷ್ಪ ತೃತೀಯ ಸ್ಥಾನ ಪಡೆದರು. ಮಕ್ಕಳಿಗೆ ಕಾಳು ಹೆಕ್ಕುವುದು ಮತ್ತು 100 ಮೀಟರ್ ಓಟದ ಸ್ಪರ್ಧೆ ಏರ್ಪಡಿಸಲಾಗಿತ್ತು.
ಕಾರ್ಯಕ್ರಮದಲ್ಲಿ ಐರಿ ಸಮಾಜದ ಅಧ್ಯಕ್ಷ ಮೇಲತ್ತಂಡ ರಮೇಶ್, ಉಪಾಧ್ಯಕ್ಷೆ ಬಬ್ಬೀರ ಸರಸ್ವತಿ, ಕಾರ್ಯದರ್ಶಿ ಕಾಮೆಯಂಡ ಗಣೇಶ್, ಸೋಮವಾರಪೇಟೆ ಎಸಿಎಫ್ ಐರೀರ ಗೋಪಾಲ್, ಚಿಕ್ಕಮಗಳೂರು ಎಸಿಎಫ್ ಮಾಲೆರ ಚರಣ್, ವಿರಾಜಪೇಟೆ ಉಪ ತಹಶೀಲ್ದಾರ್ ಅಂಜಪAಡ ಪುರುಷೋತ್ತಮ್, ರಾಮನಗರ ಸಹಾಯಕ ಅಗ್ನಿಶಾಮಕ ಠಾಣಾಧಿಕಾರಿ ಬೊಳ್ಳನಮಂಡ ಉತ್ತಪ್ಪ, ಸಿಆರ್ಪಿಎಫ್ ಎಸ್‌ಐ ಅಯ್ಯಣೀರ ಗಣೇಶ್, ಐರಿ ಸಮಾಜದ ಮಾಜಿ ಅಧ್ಯಕ್ಷರುಗಳಾದ ಮೇಲತ್ತಂಡ ಗೋಪಾಲ್, ತಟ್ಟಂಡ ಪೂಣಚ್ಚ. ಕೊಡವ ಸಾಹಿತ್ಯ ಅಕಾಡೆಮಿ ಸದಸ್ಯ ಪೊನ್ನೀರ ಗಗನ್ ಮತ್ತಿತರರು ಇದ್ದರು.