ಶೀಘ್ರ ನಿರ್ಮಾಣವಾಗಲಿ ರಾಮಮಂದಿರ: ಕಲ್ಲಡ್ಕಡಾ.ಪ್ರಭಾಕರ ಭಟ್‌ರಲ್ಲಿ ಆಶಯ ವ್ಯಕ್ತಪಡಿಸಿದ ಜನಾರ್ದನ ಪೂಜಾರಿ

Prabhakara bhart anda janardana poojary
Published on

ಬಂಟ್ವಾಳ: ಅಯೋಧ್ಯೆಯಲ್ಲಿ ಶ್ರೀರಾಮ ಮಂದಿರ ನಿರ್ಮಾಣ ಉತ್ತಮ ಕೆಲಸವಾಗಿದ್ದು, ಶೀಘ್ರ ನಿರ್ಮಾಣವಾಗಲಿ ಎಂದು ಕೇಂದ್ರದ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು.

ನಿಧಿ ಸಂಗ್ರಹ ಅಭಿಯಾನದ ಹಿನ್ನೆಲೆ ಆರ್‌ಎಸ್‌ಎಸ್ ಮುಖಂಡ ಡಾ.ಪ್ರಭಾಕರ್ ಭಟ್ ಕಲ್ಲಡ್ಕ ನೇತೃತ್ವದ ನಿಯೋಗ ಪೂಜಾರಿಯವರನ್ನು ಬಂಟ್ವಾಳದ ನಿವಾಸದಲ್ಲಿ ಭೇಟಿಯಾಗಿದ್ದು, ಡಾ.ಭಟ್ ದಂಪತಿ ಪೂಜಾರಿಯವರ ಕಾಲುಮುಟ್ಟಿ ನಮಸ್ಕರಿಸಿ ಯೋಗಕ್ಷೇಮ ವಿಚಾರಿಸಿದರು.

ಈ ನಿಯೋಗ ಬೆಳ್ತಂಗಡಿಯ ಮಾಜಿ ಶಾಸಕ ವಸಂತ ಬಂಗೇರ, ಸುಳ್ಯದಿಂದ ವಿಧಾನಸಭೆಗೆ ಸ್ಪರ್ಧಿಸಿದ್ದ ಮುಖಂಡ ಡಾ.ರಘು ಮನೆಗಳಿಗೂ ಭೇಟಿ ನೀಡಿ ನಿಧಿ ಸಂಗ್ರಹಿಸಿದೆ. ಪ್ರಮುಖರಾದ ಕೊಡ್ಮಾಣ್ ಕಾಂತಪ್ಪ ಶೆಟ್ಟಿ, ವಿನೋದ್ ಕೆ., ಅಶೋಕ್ ಶೆಟ್ಟಿ ಸರಪಾಡಿ, ವಕೀಲ ಪ್ರಸಾದ್ ಕುಮಾರ್ ರೈ, ಕಮಲಾ ಪ್ರಭಾಕರ್ ಭಟ್ ಉಪಸ್ಥಿತರಿದ್ದರು.

ಅಯೋಧ್ಯೆಯಲ್ಲಿ ಪ್ರಭು ಶ್ರೀ ರಾಮಚಂದ್ರನ ಮಂದಿರ ನಿರ್ಮಾಣಕ್ಕಾಗಿ ನಿಧಿ ಸಂಗ್ರಹಕ್ಕೆಂದು ನಾವು ಮನೆ ಮನೆಗೆ ತೆರಳುವ ಭಾಗವಾಗಿ ಕಾಂಗ್ರೆಸ್ ಮುಖಂಡರ ಮನೆಗಳಿಗೂ ತೆರಳಿದ್ದೇವೆ. ಪಕ್ಷಭೇದ ಮರೆತು ರಾಮ ಮಂದಿರಕ್ಕಾಗಿ ಮುಕ್ತ ಮನಸ್ಸಿನಿಂದ ದೇಣಿಗೆ ನೀಡಿದ್ದಾರೆ. ರಾಮ ಮಂದಿರ ಭಾರತದ ಅಸ್ಮಿತೆಯ ಸಂಕೇತ. ಮಂದಿರ ನಿರ್ಮಾಣ ಸಮಸ್ತ ಹಿಂದು ಬಾಂಧವರ ಸಂಕಲ್ಪ.

- ಡಾ.ಪ್ರಭಾಕರ ಭಟ್ ಕಲ್ಲಡ್ಕ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net