ಕಲಘಟಗಿಯಲ್ಲಿ ಅಯೋಧ್ಯೆ ಮಂತ್ರಾಕ್ಷತೆ ಮೆರವಣಿಗೆ

03-klg 2
Published on

ಕಲಘಟಗಿ: ಅಯೋಧ್ಯೆಯ ಶ್ರೀರಾಮ ಜನ್ಮಭೂಮಿಯಿಂದ ಬಂದ ಪವಿತ್ರ ಮಂತ್ರಾಕ್ಷತೆಯನ್ನು ವಿಶ್ವ ಹಿಂದು ಪರಿಷತ್, ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ನೇತೃತ್ವದಲ್ಲಿ ಪಟ್ಟಣದಲ್ಲಿ ಶ್ರೀ ರಾಮನ ಘೊಷಣೆ ಕೂಗುವ ಮೂಲಕ ಭಾವಚಿತ್ರದ ಅದ್ದೂರಿ ಮೆರವಣಿಗೆ ಮಾಡಲಾಯಿತು.


ಹನ್ನೆರಡು ಮಠದ ಬಳಿ ಪವಿತ್ರ ಮಂತ್ರಾಕ್ಷತೆ ಪುರ ಪ್ರವೇಶಕ್ಕೆ ತಾಲೂಕಿನ ಜನರು ಭವ್ಯ ಸ್ವಾಗತ ಕೋರಿದರು. ಪಟ್ಟಣದ ಪ್ರಮುಖ ಬೀದಿಗಳಲ್ಲಿ ಪವಿತ್ರ ಮಂತ್ರಾಕ್ಷತೆಯನ್ನು ಜೈ ಶ್ರೀರಾಮ್ ಎಂಬ ವೇದಘೊಷಗಳನ್ನು ಕೂಗುತ್ತಾ ವಿವಿಧ ವಾದ್ಯ ಮೇಳಗಳೊಂದಿಗೆ ಮೆರವಣಿಗೆ ಮಾಡಿ ಪಟ್ಟಣದ ದೇಸಾಯಿ ಓಣಿಯಲ್ಲಿನ ರಾಮ ಮಂದಿರದಲ್ಲಿ ಧಾರ್ವಿುಕ ವಿಧಿ ವಿಧಾನಗಳಿಂದ ಪೂಜೆ ನೆರವೇರಿಸಿ ಪುಷ್ಪಾರ್ಚನೆ ಸಲ್ಲಿಸಲಾಯಿತು.


ಹನ್ನೆರಡು ಮಠದ ರೇವಣಸಿದ್ಧ ಶಿವಾಚಾರ್ಯರು ಸಾನ್ನಿಧ್ಯ ವಹಿಸಿದ್ದರು. ಬಿಜೆಪಿ ಮುಖಂಡ ಶಶಿಧರ ನಿಂಬಣ್ಣವರ, ಫಕೀರೇಶ ನೇಸರೇಕರ, ಐ ಸಿ ಗೋಕುಲ, ಅಣ್ಣಪ್ಪ ಓಲೇಕಾರ, ಗಂಗಪ್ಪ ಗೌಳಿ, ಬಸವರಾಜ ಹೊನ್ನಿಹಳ್ಳಿ, ಪರಶುರಾಮ ಹುಲಿಹೊಂಡ, ಸುರೇಶ ಶೀಲವಂತರ, ಶ್ರೀಧರ ದ್ಯಾವಪ್ಪನವರ, ಪುಂಡಲೀಕ ಜಾಧವ, ಆನಂದ ಕಡ್ಡಾಸ್ಕರ, ಶ್ರೀಕಾಂತಗೌಡ ಪಾಟೀಲ, ಶ್ರೀಧರ ದ್ಯಾವಪ್ಪನವರ, ಕೃಷ್ಣಾಜಿ ತಹಶೀಲ್ದಾರ್, ಅಶೋಕ ತೇಗಣ್ಣವರ, ಮಾಂತೇಶ ವಿರಕ್ತಿಮಠ ಇದ್ದರು.

*

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net