ಅಯೋಧ್ಯೆ ಶ್ರೀರಾಮನ ಅಕ್ಷತೆಗೆ ಸ್ವಾಗತ

30-12.MDL.02
Published on

ಮುದಗಲ್: ಅಯೋಧ್ಯೆ ಶ್ರೀರಾಮ ಮಂದಿರ ಉದ್ಘಾಟನಾ ಕಾರ್ಯಕ್ರಮ ಹಿನ್ನೆಲೆಯಲ್ಲಿ ಮನೆ ಮನೆಗೆ ಅಕ್ಷತೆ ತಲುಪಿಸುವ ಯಾತ್ರೆಯನ್ನು ಪಟ್ಟಣದ ಮಾರುತೇಶ್ವರ ದೇವಸ್ಥಾನ ಬಳಿ ಕಳಸ ಹಾಗೂ ವಾದ್ಯಮೇಳದೊಂದಿಗೆ ಅದ್ದೂರಿಯಾಗಿ ಸ್ವಾಗತಿಸಲಾಯಿತು.

ಪಟ್ಟಣದ ಪ್ರಮುಖ ರಸ್ತೆಗಳಲ್ಲಿ ಸಂಚರಿಸಿದ ಬಳಿಕ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ಯಾತ್ರೆ ಸಂಪನ್ನವಾಯಿತು. ಪರಿಮಳಾ ಗುರುಕುಲ ಶಾಲೆಯ ವಿದ್ಯಾರ್ಥಿಗಳು ಶ್ರೀ ರಾಮ, ಲಕ್ಷ್ಮಣ, ಸೀತೆ ಹಾಗೂ ಆಂಜನೇಯ ವೇಷ ತೊಟ್ಟು ನೋಡುಗರ ಗಮನ ಸೆಳೆದರು. ಪ್ರಮುಖರಾದ ಡಾ.ಗುರುರಾಜ ದೇಶಪಾಂಡೆ, ಸಣ್ಣ ಸಿದ್ದಯ್ಯ, ಶಶಿಕಲಾ ಭೋೀವಿ, ನಾರಾಯಣ ರಾವ್ ದೇಶಪಾಂಡೆ, ಗುರುಬಸಪ್ಪ ಸಜ್ಜನ್, ಮಹೇಶ ವಸ್ತ್ರದ, ಮಲ್ಲಪ್ಪ ಹೂಗಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net