ರಾಮ ಮಂದಿರ ಉದ್ಘಾಟನಾ ಆಹ್ವಾನ ಪತ್ರ ವಿತರಣೆ

SRP_26-04jpj
Published on

ಶ್ರೀರಂಗಪಟ್ಟಣ: ಪಟ್ಟಣದ ಜ್ಯೋತಿಮಹೇಶ್ವರಸ್ವಾಮಿ ದೇವಾಲಯದಲ್ಲಿ ಡಿ.27ರಂದು ಅಯೋಧ್ಯೆಯ ಶ್ರೀರಾಮನ ಮಂದಿರ ಉದ್ಘಾಟನೆಗೆ ಜಾತಿ, ಧರ್ಮ, ಭೇದವಿಲ್ಲದೆ ಎಲ್ಲರಿಗೂ ಮಂತ್ರಾಕ್ಷತೆ ವಿತರಿಸುವ ಮೂಲಕ ಆಹ್ವಾನಿಸಲಾಗುವುದು ಎಂದು ಜ್ಯೋತಿಷಿ ಭಾನುಪ್ರಕಾಶ್ ಶರ್ಮಾ ತಿಳಿಸಿದರು.

ಅಯೋಧ್ಯೆಯಿಂದ ಶ್ರೀರಂಗಪಟ್ಟಣಕ್ಕೆ ವಿಶೇಷ ರಥದಲ್ಲಿ 22 ಕುಂಭಗಳಲ್ಲಿ ಪ್ರಭು ಶ್ರೀರಾಮನ ಭಾವಚಿತ್ರ ಹಾಗೂ ದೇವಾಲಯ ಉದ್ಘಾಟನೆ ಕಾರ್ಯಕ್ರಮದ ಆಹ್ವಾನ ಪತ್ರಿಕೆ ಸಮೇತ ಮಂತ್ರಾಕ್ಷತೆ ಆಗಮಿಸಿದೆ. 27ರಂದು ಬೆಳಗ್ಗೆ 10 ಗಂಟೆಗೆ ಈ ಕಾರ್ಯಕ್ರಮಕ್ಕೆ ಗಂಜಾಂನ ಆದಿಶಂಕರ ಮಠದ ಶ್ರೀ ಗಣೇಶ ಸ್ವರೂಪನಂದಗಿರಿ ಸ್ವಾಮೀಜಿ, ಗೌತಮ ಕ್ಷೇತ್ರದ ಗಜಾನನ ಶ್ರೀ, ಚಂದ್ರವನ ಆಶ್ರಮದ ಶ್ರೀ ತ್ರಿನೇತ್ರ ಮಹಾಂತ ಸ್ವಾಮೀಜಿ ಚಾಲನೆ ನೀಡಲಿದ್ದಾರೆ.

ಲ್ಲರೂ ಶ್ರೀರಾಮನ ದೇವಾಲಯ ಉದ್ಘಾಟನಾ ಕಾರ್ಯಕ್ರಮಕ್ಕೆ ತೆರಳಲು ಆಹ್ವಾನ ಪತ್ರಿಕೆ ವಿತರಿಸಲಾಗುವುದು ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು. ವಿಶ್ವ ಹಿಂದು ಪರಿಷತ್ ತಾಲೂಕು ಸಂಚಾಲಕ ಬೆಳಗೊಳ ಸುನೀಲ್ ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net