ಆಂಜನೇಯ ದೇಗುಲದಲ್ಲಿ ಮಂತ್ರಾಕ್ಷತೆಗೆ ಪೂಜೆ

29SPT03
Published on

ಸೋಮವಾರಪೇಟೆ: ಅಯೋಧ್ಯೆ ಶ್ರೀರಾಮ ಜನ್ಮಭೂಮಿಯಲ್ಲಿ ಜ.22ರಂದು ನಡೆಯಲಿರುವ ಶ್ರೀರಾಮನ ಪ್ರತಿಷ್ಠಾ ಮಹೋತ್ಸವದ ಅಂಗವಾಗಿ ಶ್ರೀರಾಮ ಜನ್ಮಭೂಮಿ ತೀರ್ಥಕ್ಷೇತ್ರ ಟ್ರಸ್ಟ್ ವತಿಯಿಂದ ಮಂತ್ರಾಕ್ಷತೆಯನ್ನು ಆಂಜನೇಯ ದೇವಾಲಯ ಸಮಿತಿಗೆ ಬುಧವಾರ ನೀಡಲಾಯಿತು.

ಮಂತ್ರಾಕ್ಷತೆಯನ್ನು ದೇವಾಲಯದ ಸಮಿತಿ ಅಧ್ಯಕ್ಷ ಬನ್ನಳ್ಳಿ ಗೋಪಾಲ್ ಪಡೆದುಕೊಂಡರು. ಅರ್ಚಕ ನಂಜುಂಡೇಶ್ವರ ಭಟ್ ಮಂತ್ರಾಕ್ಷತೆಗೆ ವಿಶೇಷ ಪೂಜೆ ನೆರವೇರಿಸಿದರು. ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎಚ್.ಕೆ. ಮಾದಪ್ಪ, ಹಿಂದು ಜಾಗರಣ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಸುಭಾಷ್ ತಿಮ್ಮಯ್ಯ, ಪ್ರಮುಖರಾದ ಬಿ.ಬಿ.ಭಾರತೀಶ್, ಎಂ.ಬಿ.ಉಮೇಶ್, ಮಹೇಶ್ ತಿಮ್ಮಯ್ಯ, ಸಿ.ಸಿ.ನಂದ, ದರ್ಶನ್ ಜೋಯಪ್ಪ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net