ಆರ್‌ಎಸ್‌ಎಸ್‌ನಿಂದ ಹಿಂದು ಸಂಸ್ಕೃತಿ ರಕ್ಷಣೆ

1301 MLK 01
ಮಳಖೇಡದ ಮೂಲಾಧಾರ ಬೃಹನ್ಮಠದಲ್ಲಿ ಅಯೋಧ್ಯೆಯಿಂದ ಆಗಮಿಸಿದ ಮಂತ್ರಾಕ್ಷತೆಗೆ ಪೂಜೆ ಸಲ್ಲಿಸಿ ಶನಿವಾರ ವಿತರಣೆ ಮಾಡಲಾಯಿತು. ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು, ಅಶೋಕ ಪಾಟೀಲ್ ಇತರರಿದ್ದರು.
Published on

ಮಳಖೇಡ: ರಾಷ್ಟ್ರೀಯ ಸ್ವಯಂ ಸೇವಾ ಸಂಘದಿಂದ ಹಿಂದು ಸಂಸ್ಕೃತಿ ರಕ್ಷಣೆಯಾಗುತ್ತಿದೆ ಎಂದು ಮೂಲಾಧಾರ ಬೃಹನ್ಮಠದ ಶ್ರೀ ಅಭಿನವ ಕಾರ್ತಿಕೇಶ್ವರ ಶಿವಾಚಾರ್ಯರು ನುಡಿದರು.

ಮೂಲಾಧಾರ ಬೃಹನ್ಮಠದಲ್ಲಿ ಶ್ರೀ ರಾಮ ಜನ್ಮಭೂಮಿ ತೀರ್ಥ ಟ್ರಸ್ಟ್ ಹಾಗೂ ವಿಶ್ವ ಹಿಂದು ಪರಿಷತ್‌ನಿಂದ ಶನಿವಾರ ಆಯೋಜಿಸಿದ್ದ ಅಯೋಧ್ಯೆ ರಾಮ ಮಂದಿರದ ಮಂತ್ರಾಕ್ಷತೆ ವಿತರಣೆ ಕಾರ್ಯಕ್ರಮದಲ್ಲಿ ಮಾತನಾಡಿ, ಶ್ರೀರಾಮನು ಆದರ್ಶವಾದಿ. ಸಹೋದರರು, ತಂದೆ-ತಾಯಿ ಹಾಗೂ ಧರ್ಮಪತ್ನಿ ಜತೆ ಹೇಗಿರಬೇಕು ಎಂದು ಇಡೀ ವಿಶ್ವಕ್ಕೆ ತೋರಿಸಿದ್ದಾನೆ. ಶ್ರೀ ವಿಷ್ಣುವಿನ ಏಳನೇ ಅವತಾರವಾದ ಶ್ರೀ ರಾಮನು ಧರ್ಮ ರಕ್ಷಣೆ ಮಾಡಿ, ಅಧರ್ಮವನ್ನು ನಿರ್ಣಾಮ ಮಾಡಿದ್ದಾನೆ ಎಂದರು.

ಆರ್‌ಎಸ್‌ಎಸ್ ಜಿಲ್ಲಾ ಸಂಚಾಲಕ ಅಶೋಕ ಪಾಟೀಲ್, ಪ್ರಮುಖರಾದ ದೇವಾನಂದ ದೇಸಾಯಿ, ಸಂದೀಪ ತೇಗಲತಿಪ್ಪಿ, ಮಾಧವರೆಡ್ಡಿ, ನಾಗರಾಜ ಮಾಲಿಪಾಟೀಲ್, ಮಲಕಣ್ಣ ದಂಡೋತಿ, ಅಭಿಷೇಕ ಬಜಾರ, ದೀಪಾ ದೇಶಪಾಂಡೆ, ಶಿಲ್ಪಾ ಇವಣಿ, ಗೀತಾ ಆದಿತ್ಯನಗರ, ವಿಶ್ವನಾಥ ಕುಕ್ಕುಂದಾ, ಮೌನೇಶ ಕಡ್ಲಿ ಇತರರಿದ್ದರು. ನಾಗರಾಜ ಮಠಪತಿ ಸ್ವಾಗತಿಸಿದರು. ಅವಿನಾಶ ನಿರೂಪಣೆ ಮಾಡಿದರು. ನಾಗೇಂದ್ರಪ್ಪ ಸರಡಗಿ ವಂದಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net