ಪಾದಯಾತ್ರೆ ಮುಗಿಸಿ ವಾಪಸಾದ ಯುವಕ, ಡಿ. 22ರಂದು ಅಯೋಧ್ಯೆಗೆ ತೆರಳಿದ್ದ ರಾಮ ಭಕ್ತ

IMG_20240123_162423_715-2.jpg
Published on

ಹುಬ್ಬಳ್ಳಿ: ಅಯೋಧ್ಯೆಯ ಶ್ರೀರಾಮ ಮಂದಿರ ಉದ್ಘಾಟನೆ ಹಿನ್ನೆಲೆಯಲ್ಲಿ ಅಲ್ಲಿಗೆ ಕಾಲ್ನಡಿಗೆಯಲ್ಲಿ ತೆರಳುವ ಸಂಕಲ್ಪ ಮಾಡಿದ್ದ ನಗರದ ಯುವಕ ಅದರಂತೆ ಪಾದಯಾತ್ರೆ ಮುಗಿಸಿ ಮಂಗಳವಾರ ವಾಪಸಾಗಿದ್ದಾನೆ.

ಇಲ್ಲಿಯ ಆನಂದ ನಗರದ ಘೋಡಕೆ ಪ್ಲಾಟ್ ನಿವಾಸಿ ಮನೋಜ್ ಅರ್ಕಾಟ್ ಪಾದಯಾತ್ರೆ ಕೈಗೊಂಡು ರ್ಪೂತಿಗೊಳಿಸಿದ ಯುವಕ.

ಹಲವು ಸಂಕಷ್ಟಗಳ ಮಧ್ಯೆಯೂ ಅಯೋಧ್ಯೆ ತಲುಪಿ ಶ್ರೀರಾಮನ ದರ್ಶನ ಪಡೆದು ವಾಪಸಾದ ಮನೋಜ್ ಇದೀಗ ಸಂತಸದಲ್ಲಿದ್ದಾರೆ. ದೇವರ ದರ್ಶನವಾಗಿದೆ, ನಾನೀಗ ಧನ್ಯ ಎಂದು ಹೇಳುತ್ತಾರೆ.

ಹುಬ್ಬಳ್ಳಿಯಿಂದ 1800 ಕಿ.ಮೀ. ದೂರದ ಅಯೋಧ್ಯೆಯನ್ನು ತಲುಪುವ ನನ್ನ ಆಶಯಕ್ಕೆ ಅಲ್ಲಲ್ಲಿ ರಾಮಭಕ್ತರು ಸಹಕಾರ ನೀಡಿದರು. ಎಲ್ಲರ ಬೆಂಬಲ ಹಾರೈಕೆಯಿಂದಾಗಿ ಪಾದಯಾತ್ರೆ ರ್ಪೂಣಗೊಳಿಸಲು ಸಾಧ್ಯವಾಯಿತು ಎಂದು ಮನೋಜ್ ಹೇಳಿದರು.

ಒಟ್ಟು 28 ದಿನಗಳವರೆಗೆ ಪಾದಯಾತ್ರೆ ಕೈಗೊಂಡು ಜನೆವರಿ 20ಕ್ಕೂ ಮೊದಲೇ ಅಯೋಧ್ಯೆ ತಲುಪಿದ ಮನೋಜ್, ಸುತ್ತಲಿನ ಸ್ಥಳಗಳ ದರ್ಶನ ಮಾಡಿದರು. ಶ್ರೀರಾಮ ಮಂದಿರ ಉದ್ಘಾಟನೆ ನಂತರ ಪ್ರವೇಶಕ್ಕೆ ಸಾರ್ವಜನಿಕರಿಗೆ ಅವಕಾಶ ನೀಡಿದ ಕೂಡಲೇ ದೇವರ ದರ್ಶನ ಮಾಡಿದರು.
ಅಲ್ಲಿಂದ ರೈಲಿನ ಮೂಲಕ ಮಂಗಳವಾರ ಬೆಳಗ್ಗೆ ಹುಬ್ಬಳ್ಳಿಗೆ ವಾಪಸಾಗಿದ್ದಾರೆ.

ಹುಬ್ಬಳ್ಳಿಗೆ ಬಂದ ನಂತರ ಅನೇಕ ರಾಮಭಕ್ತರು ಮನೋಜ್ನ ಸಾಧನೆಗೆ ಅಭಿನಂದನೆ ಸಲ್ಲಿಸಿದ್ದಾರೆ. ಅಯೋಧ್ಯೆಗೆ ಪಾದಯಾತ್ರೆಯು ಒಂದು ವಿಶಿಷ್ಟ ಸೇವೆ ಎಂದು ಅಭಿಮಾನ ವ್ಯಕ್ತಪಡಿಸುತ್ತಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net