ಮನೆ ಮನೆ ಸಂಪರ್ಕ ಮಂತ್ರಾಕ್ಷತೆ ಅಭಿಯಾನ

udp-1-kaniyuru sri
Published on

ಉಡುಪಿ: ರಾಮಸೇವೆಯಲ್ಲಿ ತೊಡಗಿಸಿಕೊಳ್ಳುವುದು ನಮ್ಮ ಭಾಗ್ಯ. ಮಂತ್ರಾಕ್ಷತೆ ಭಗವದ್ರೂಪ. ದೇವರೇ ಮನೆಗೆ ಬಂದಂತೆ. ಇದನ್ನು ಬಹಳಷ್ಟು ಜಾಗ್ರತೆಯಲ್ಲಿ ದೇವರಕೋಣೆಯಲ್ಲಿ ಇಟ್ಟುಕೊಳ್ಳಬೇಕು. ರಾಮದೇವರ ಪ್ರತಿಷ್ಠೆ ದಿನದಂದು ಪ್ರತಿ ಗ್ರಾಮಗಳಲ್ಲಿ ಭಜನೆ ಮುಂತಾದ ಧಾರ್ಮಿಕ ಕಾರ್ಯಕ್ರಮಗಳು ನಡೆಯಬೇಕು. ಪ್ರತಿಯೊಬ್ಬರ ಮನೆಗಳಲ್ಲಿ ಉತ್ತರ ದಿಕ್ಕಿಗೆ ಮುಖಮಾಡಿ ಕನಿಷ್ಠ 5 ರಾಮಜ್ಯೋತಿ ಬೆಳಗಿಸಬೇಕು ಎಂದು ಕಾಣಿಯೂರು ಶ್ರೀ ವಿಧ್ಯಾವಲ್ಲಭ ತೀರ್ಥ ಶ್ರೀಪಾದರು ಹೇಳಿದರು.

ಸೋಮವಾರ ಅಯೋಧ್ಯೆ ರಾಮಮಂದಿರ ಪ್ರತಿಷ್ಠಾ ಮಹೋತ್ಸವ ಅಂಗವಾಗಿ ನಗರ ವ್ಯಾಪ್ತಿಯ ಮನೆ ಮನೆ ಸಂಪರ್ಕ - ಮಂತ್ರಾಕ್ಷತೆ ಅಭಿಯಾನಕ್ಕೆ ಚಾಲನೆ ನೀಡಿ ಮಾತನಾಡಿದರು.

ಅಯೋಧ್ಯೆ ರಾಮಮಂದಿರ ನಿರ್ಮಾಣಕ್ಕೆ ಕೋಟ್ಯಂತರ ರಾಮ ಭಕ್ತರು ತಮ್ಮದೇ ರೀತಿಯ ಕೊಡುಗೆ ನೀಡಿದ್ದಾರೆ. ಪ್ರಸ್ತುತ ರಾಮನ ಮೂರ್ತಿಯ ಪ್ರತಿಷ್ಠಾಪನೆ ಸಂದರ್ಭದಲ್ಲಿ ಪ್ರತಿ ಗ್ರಾಮಗಳಿಗೂ ರಾಮಾಕ್ಷತೆ ತಲುಪಿಸುವ ಮೂಲಕ ರಾಷ್ಟ್ರ ಭಕ್ತರನ್ನು ಒಗ್ಗೂಡಿಸುವ ಕೆಲಸ ಶ್ಲಾನೀಯ ಎಂದರು.

ನಗರಸಂ ಚಾಲಕ್​ ಮಟ್ಟು ಲಕ್ಷಿ$್ಮ ನಾರಾಯಣ, ವಿಭಾಗ ಕಾರ್ಯವಾಹ ವಾದಿರಾಜ್​, ಹಿರಿಯ ಪ್ರಚಾರಕ್​ ದಾ.ಮಾ. ರವೀಂದ್ರ, ಗಣೇಶ್​ ಶೆಣೈ, ಅಭಿಯಾನ ನಗರ ಸಂಚಾಲಕ ಮನೋಜ್​ ಮಲ್ಪೆ, ಸಂಯೋಜಕ ಶಶಾಂಕ್​ ಶಿವತ್ತಾಯ, ಪ್ರಮುಖರಾದ ರುರಾಮ ಅಚಾರ್ಯ, ಶ್ಯಾಮಪ್ರಸಾದ್​ ಕುಡ್ವ, ಅಂಡಾರು ದೇವಿಪ್ರಸಾದ್​ ಶೆಟ್ಟಿ, ಗೀತಾ ಶೇಟ್​, ಭಾರತೀ ಚಂದ್ರಶೇಖರ್​ ಮೊದಲಾದವರು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net