ಪ್ರತಿಯೊಬ್ಬರೂ ದೇಣಿಗೆ ನೀಡಿ

NDG 15-1
Published on

ನಿಡಗುಂದಿ: ಅಯ್ಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣದ ನಿಧಿ ಸಮರ್ಪಣೆ ಕಾರ್ಯಕ್ರಮ ಶುಕ್ರವಾರ ನಡೆಯಿತು.

ಬಿಜೆಪಿ ಮುಖಂಡ ಶಿವಾನಂದ ಮುಚ್ಚಂಡಿ ಅವರ ಮನೆಯಿಂದ ನಡೆದ ಕಾರ್ಯಕ್ರಮಕ್ಕೆ ಸ್ಥಳೀಯ ರುದ್ರೇಶ್ವರ ಸಂಸ್ಥಾನ ಮಠದ ರುದ್ರಮುನಿ ಶ್ರೀ, ಇಟಗಿ ಗುರುಶಾಂತವೀರ ಶ್ರೀಗಳು ಚಾಲನೆ ನೀಡಿದರು.

ಮಾಜಿ ಜಿಪಂ ಸದಸ್ಯ ಶಿವಾನಂದ ಅವಟಿ ಮಾತನಾಡಿ, ಪವಿತ್ರ ರಾಮಮಂದಿರ ನಿರ್ಮಾಣದ ಕಾರ್ಯಕ್ಕೆ ಪ್ರತಿಯೊಬ್ಬರೂ ದೇಣಿಗೆ ನೀಡಿ ಸಮರ್ಪಣೆ ಅರ್ಪಿಸಬೇಕು. ಈ ಪವಿತ್ರ ಕಾರ್ಯಕ್ಕೆ ಯಾರೂ ಸಬೂಬು ಹೇಳದೆ ಮುಕ್ತ ಮನಸ್ಸಿನಿಂದ ಕೈಲಾದಷ್ಟು ದೇಣಿಗೆ ನೀಡಬೇಕು. ರಾಮ ಮಂದಿರ ನಿರ್ಮಾಣದ ಕನಸು ಹಲವಾರು ದಶಕಗಳದ್ದಾಗಿದೆ. ಪ್ರಧಾನಿ ನರೇಂದ್ರ ಮೋದಿ, ಹಿಂದೂಗಳ ಈ ಕನಸನ್ನು ಸಾಕಾರಗೊಳಿಸಿದ್ದಾರೆ. ರಾಮ ಮಂದಿರ ನಿರ್ಮಾಣಕ್ಕೆ ಪ್ರತಿಯೊಬ್ಬರೂ ದೇಣಿಗೆ ಸಲ್ಲಿಸಿ ಸಮರ್ಪಣಾಭಾವ ಅರ್ಪಿಸುವಂತೆ ಟ್ರಷ್ಟಿಗಳು ನಿರ್ಧಾರ ಕೈಗೊಂಡಿದ್ದು ಅವರ ನಿರ್ಧಾರದ ಹಿನ್ನೆಲೆ ನಿಧಿ ಸಮರ್ಪಣೆ ಕಾರ್ಯ ನಡೆಸಲಾಗುತ್ತಿದೆ ಎಂದರು.

ಬಿಜೆಪಿ ಮುಖಂಡ ಶಿವಾನಂದ ಮುಚ್ಚಂಡಿ ಮಾತನಾಡಿ, ಅಯೋಧ್ಯೆಯಲ್ಲಿ ನಿರ್ಮಾಣವಾಗಲಿರುವ ರಾಮಮಂದಿರಕ್ಕೆ ಪ್ರತಿಯೊಬ್ಬರೂ ಧನ ಸಹಾಯ ನೀಡಬೇಕು. ರಾಮಮಂದಿರದ ಪವಿತ್ರ ಕಾರ್ಯದಲ್ಲಿ ಪ್ರತಿಯೊಬ್ಬರ ಹಕ್ಕು ಇರಬೇಕೆನ್ನುವ ಮಹತ್ವಾಕಾಂಕ್ಷೆಯಿಂದ ಈ ನಿಧಿ ಸಮರ್ಪಣೆ ಕಾರ್ಯ ನಡೆಸಲಾಗುತ್ತಿದೆ. 10 ರಿಂದ 2 ಸಾವಿರವರೆಗೆ ಕೋಪನ್‌ಗಳಿದ್ದು, ತಮ್ಮ ಕೈಲಾದಷ್ಟು ಕೋಪನ್ ಪಡೆಯಬಹುದು. 2 ಸಾವಿರ ಮೇಲ್ಪಟ್ಟು ನೀಡುವವರು ಚೆಕ್ ಮೂಲಕ ನೀಡಬಹುದಾಗಿದೆ ಎಂದರು.

ಶಂಕರಗೌಡ ಪಾಟೀಲ, ಬಸವರಾಜ ಕುಂಬಾರ, ಸುನೀಲ ಜಮಖಂಡಿ, ಸಿದ್ದು ಹೂಗಾರ, ಪ್ರಹ್ಲಾದ್ ಪತ್ತಾರ, ಬಸವರಾಜ ದಂಡಿನ, ಸಿಂದೂರ ಭೈರವಾಡಗಿ, ಹನಮಂತ್ರಾಯ ಗುಡದಿನ್ನಿ, ರುದ್ರು ಚಟ್ಟೇರ, ವಿಜಯಕುಮಾರ ಚಿನಿವಾಲ, ಸಂತೋಷ ಕಡಿ ಮತ್ತಿತರರಿದ್ದರು.

ನಿಡಗುಂದಿ ತಾಲೂಕಿನಿಂದ ಹೆಚ್ಚಿನ ನಿಧಿ ಸಂಗ್ರಹಿಸಿ ಸಮರ್ಪಣೆ ಮಾಡುವ ಸಂಕಲ್ಪ ನಮ್ಮದಾಗಿದ್ದು, ಪ್ರತಿ ಮನೆ ಮನೆಗೂ ಭೇಟಿ ನೀಡಲಿದ್ದು ತಮ್ಮ ಕೈಲಾದಷ್ಟು ನಿಧಿ ಸಮರ್ಪಿಸುವ ಮೂಲಕ ಎಲ್ಲರೂ ಈ ಪವಿತ್ರ ಕಾರ್ಯದಲ್ಲಿ ಕೈಜೋಡಿಸಿ ನೂತನ ತಾಲೂಕಿನ ಹಿರಿಮೆ ಹೆಚ್ಚಿಸಬೇಕು.

ಬಸವರಾಜ ದಂಡಿನ ನಿಧಿ ಸಂಗ್ರಹ ಮುಖ್ಯಸ್ಥ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net