ಪದಾಧಿಕಾರಿಗಳನ್ನು ಆಯ್ಕೆ

10 SARAG 1 Meeting
Published on

ಸರಗೂರು: ಸಮಾಜದ ಅಭಿವೃದ್ಧಿಗಾಗಿ ದುಡಿಯುತ್ತಿರುವ ಆದಿ ಕರ್ನಾಟಕ ಮಹಾಸಭಾವು ನೂತನ ತಾಲೂಕು ಸರಗೂರಿನಲ್ಲಿಯೂ ಆಸ್ಥಿತ್ವಕ್ಕೆ ಬಂದಿದ್ದು, ಮಹಾಸಭಾವು ಎರಡನೇ ಅವಧಿಗೆ ತನ್ನ ಪದಾಧಿಕಾರಿಗಳನ್ನು ಆಯ್ಕೆ ಮಾಡಿಕೊಂಡಿದೆ ಎಂದು ಮಹಾಸಭಾದ ತಾಲೂಕು ಅಧ್ಯಕ್ಷ ಇಟ್ನರಾಜಣ್ಣ ತಿಳಿಸಿದರು.

ಪಟ್ಟಣದ ಪ್ರವಾಸಿ ಮಂದಿರದಲ್ಲಿ ಶುಕ್ರವಾರ ನಡೆದ ಮಹಾಸಭಾದ ಸಭೆಯಲ್ಲಿ ಮಾತನಾಡಿದ ಅವರು, ಗೌರವಾಧ್ಯಕ್ಷರಾಗಿ ಇದಿಯಪ್ಪ, ಉಪಾಧ್ಯಕ್ಷರಾಗಿ ಪುಟ್ಟಸ್ವಾಮಿ, ಚಿನ್ನಣ್ಣ, ಕಾಳಸ್ವಾಮಿ, ನಾಗೇಂದ್ರ, ಬಿಡಗಲು ಶಿವಣ್ಣ, ಪ್ರದಾನ ಕಾರ್ಯದರ್ಶಿ ಹಾದನೂರು ಪ್ರಕಾಶ್, ಖಜಾಂಚಿಯಾಗಿ ಲಂಕೆ ಶ್ರೀನಿವಾಸ್, ಸಹಕಾರ್ಯದರ್ಶಿಯಾಗಿ ಸೂರ್ಯಕುಮಾರ್, ನಿರ್ದೇಶಕರಾಗಿ ಹಾಲಯ್ಯ, ವೆಂಕಟಾಚಲ, ಕೂಡಗಿ ಗೋವಿಂದರಾಜು, ಸಣ್ಣಪಾಪ, ಕೆ.ಗೋವಿಂದ ಶಿವಕುಮಾರ್ ಅವರನ್ನು ಸರ್ವಾನುಮತದಿಂದ ಆಯ್ಕೆ ಮಾಡಲಾಗಿದೆ ಎಂದು ಅವರು ಹೇಳಿದರು.ಬೇಡ್ಕರ್ ಟ್ರಸ್ಟ್ ಅಧ್ಯಕ್ಷ ನಾಗರಾಜು, ಜಿಪಂ ಮಾಜಿ ಉಪಾಧ್ಯಕ್ಷೆ ಬಾಗ್ಯಲಕ್ಷಿö್ಮ ನಿಂಗರಾಜು, ಮಹೇಂದ್ರ ಹೂವಿನಕೊಳ, ಲೋಕೇಶ್, ಗ್ರಾಮೀಣ ಮಹೇಶ್, ಅಣ್ಣಯ್ಯಸ್ವಾಮಿ, ಲಕ್ಷö್ಮಣ, ಕುಮಾರ್ ಸೇರಿದಂತೆ ಪದಾಧಿಕಾರಿಗಳು ಹಾಜರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net