ಕ್ರೀಡಾಪಟುಗಳು ರಾಜ್ಯ ಮಟ್ಟಕ್ಕೆ ಆಯ್ಕೆ

20BTP001
Published on

ಬೆಟ್ಟದಪುರ: ಪಿರಿಯಾಪಟ್ಟಣ ತಾಲೂಕಿನ ಬೆಟ್ಟದಪುರ ಎಸ್‌ಎಂಎಸ್ ವಿದ್ಯಾಸಂಸ್ಥೆಯ ವಿದ್ಯಾರ್ಥಿಗಳು ಮೈಸೂರಿನ ತಾಂಡವಪುರದ ಮಹಾರಾಜ ತಾಂತ್ರಿಕ ಮಹಾವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ಜಿಲ್ಲಾಮಟ್ಟದ ಕ್ರೀಡಾಕೂಟದ ವಿವಿಧ ಪಂದ್ಯಗಳಲ್ಲಿ ಜಯಗಳಿಸಿ ರಾಜ್ಯಮಟ್ಟಕ್ಕೆ ಆಯ್ಕೆಯಾಗಿದ್ದಾರೆ.

ಬಾಲಕಿಯರ ಟೆನಿಕಾಯ್ಟ್ (ಶಾಂಭವಿ, ಸಹನಾ, ಸ್ಪಂದನಾ, ಯಶಸ್ವಿನಿ ಮತ್ತು ಪ್ರಾರ್ಥನಾ) ಪ್ರಥಮ ಸ್ಥಾನ, ಬಾಲಕರ ಬಾಲ್ ಬ್ಯಾಡ್ಮಿಂಟನ್‌ನಲ್ಲಿ ಗೌತಮ್ ಹಾಗೂ ಟೆನಿಕಾಯ್ಟ್ ನಲ್ಲಿ ತಿಲಕ್ ಪ್ರಥಮ ಸ್ಥಾನ ಪಡೆದಿದ್ದಾರೆ. ಕ್ರೀಡಾಪಟುಗಳಿಗೆ ಸಂಸ್ಥೆ ವತಿಯಿಂದ ಶನಿವಾರ ಅಭಿನಂದನೆ ಸಲ್ಲಿಸಲಾಯಿತು.

ವಿದ್ಯಾ ಸಂಸ್ಥೆ ಸಂಸ್ಥಾಪಕ ಬಿ.ವಿ ಮಂಜುನಾಥ್, ಕಾರ್ಯದರ್ಶಿ ಎ.ವಿ ಛಾಯಾ, ಪ್ರಾಂಶುಪಾಲ ರಾಜು, ಕ್ರೀಡಾ ಕಾರ್ಯದರ್ಶಿಗಳಾದ ಶಿವಕುಮಾರ, ಸತೀಶ್, ಉಪನ್ಯಾಸಕರಾದ ಕುಬೇರ, ವಸಂತ್, ಯಶವಂತ್ ಬಸವರಾಜ್, ನವೀನ್ ಕುಮಾರ, ರಾಮೇಗೌಡ, ಮಂಜುನಾಥ, ಬಸವರಾಜ್, ಸುನಿಲ್, ಪ್ರತಾಪ್ , ಹರ್ಷಿತಾ, ರಶ್ಮಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net