

ಅರಸೀಕೆರೆ : ತೀವ್ರ ಕುತೂಹಲ ಮೂಡಿಸಿದ್ದ ಪಿಕಾರ್ಡ್ (ಪಿಎಲ್ಡಿ) ಬ್ಯಾಂಕ್‌ಗೆ ಜೆಡಿಎಸ್ ಬೆಂಬಲಿತರಾದ ಶಶಿವಾಳ ಗಂಗಾಧರ ಅಧ್ಯಕ್ಷ ಹಾಗೂ ಬೇವಿನಹಳ್ಳಿ ಯೋಗೀಶ್ ಅವಿರೋಧ ಆಯ್ಕೆಯಾಗಿದ್ದಾರೆ. ಗುರುವಾರ ನಿಗದಿಯಾಗಿದ್ದ ಚುನಾವಣೆಗೆ 15 ಸದಸ್ಯ ಬಲದ ಬ್ಯಾಂಕಿನ ನಿರ್ದೇಶಕರ ಪೈಕಿ ಗಂಗಾಧರ ಹಾಗೂ ಯೋಗೀಶ್ ಹೊರತು ಪಡಿಸಿ ಬೇರೆ ಯಾರೂ ನಾಮಪತ್ರ ಸಲ್ಲಿಸಿದ ಹಿನ್ನೆಲೆಯಲ್ಲಿ ಚುನಾವಣಾಧಿಕಾರಿ ದೇವರಾಜ್ ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಈ ಸಂದರ್ಭ ಜೆಡಿಎಸ್ ಬೆಂಬಲಿಗರು, ಮುಖಂಡರು ಸಿಹಿ ಹಂಚಿ, ನಾಯಕರಿಗೆ ಹಾರ ಸಮರ್ಪಿಸಿ, ಶಾಲು ಹೊದಿಸಿ ಸನ್ಮಾನಿಸಿ ಸಂಭ್ರಮಿಸಿದರು.