ಬೋರೆಗೌಡ ಅವಿರೋಧ ಆಯ್ಕೆ

ಫೋಟೋ ಶೀರ್ಷಿಕೆ 09 ಸಿಆರ್_ಪಿ-2ಎ
Published on

ಚನ್ನರಾಯಪಟ್ಟಣ : ಚನ್ನರಾಯಪಟ್ಟಣ ಕಸಬಾ ಪ್ರಾಥಮಿಕ ಕೃಷಿಪತ್ತಿನ ಸಹಕಾರ ಸಂಘದ ಅಧ್ಯಕ್ಷರಾಗಿ ಕುರುವಂಕ ಗ್ರಾಮದ ಕೆ.ಎನ್. ಬೋರೆಗೌಡರ ಶನಿವಾರ ಅವಿರೋಧ ಆಯ್ಕೆಯಾದರು. ನೂತನ ಅಧ್ಯಕ್ಷರನ್ನು ಶಾಸಕ ಸಿ.ಎನ್. ಬಾಲಕೃಷ್ಣ ಸೇರಿದಂತೆ ಸಂಘದ ಎಲ್ಲ ನಿರ್ದೇಶಕರು ಅಭಿನಂದಿಸಿದರು.
ಬಿ.ಕೆ.ಲತಾ ಸುರೇಶ್ ಅವರ ರಾಜೀನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಚುನಾವಣೆ ನಿಗದಿಯಾಗಿತ್ತು. ಬೋರೆಗೌಡ ಹೊರತುಪಡಿಸಿ ಯಾರೂ ನಾಮಪತ್ರ ಸಲ್ಲಿಸದ ಕಾರಣ ಚುನಾವಣಾಧಿಕಾರಿಯಾಗಿದ್ದ ಸುನೀಲ್ ಅವರು ಅವಿರೋಧ ಆಯ್ಕೆ ಘೋಷಣೆ ಮಾಡಿದರು. ಶಾಸಕ ಬಾಲಕೃಷ್ಣ, ರಾಜ್ಯ ಮಾರಾಟ ಮಹಾ ಮಂಡಳದ ನಿರ್ದೇಶಕ ಸಿ.ಎನ್. ಪುಟ್ಟಸ್ವಾಮೀಗೌಡ ಸೇರಿ ಎಲ್ಲ ನಿರ್ದೇಶಕರೂ ಅಭಿನಂದಿಸಿದರು. ಸಂಘದ ಉಪಾಧ್ಯಕ್ಷ ಬಾಳೆಮಂಡಿ ಸುರೇಶ್, ನಿರ್ದೇಶಕರಾದ ಸುರೇಶ್, ನಂಜುಂಡಸ್ವಾಮಿ ಕೆ.ಎಸ್. ಮಂಜಪ್ಪ, ರಂಗಸ್ವಾಮಿ, ಕಾವೇರಮ್ಮ, ಗೋವಿಂದಯ್ಯ, ಮಧು, ಸಿಇಒ ರಮೇಶ, ಮೇಲ್ಪಿಚಾರಕ ಅಭಿಷೇಕ್ ಇತರರು ಹಾಜರಿದ್ದರು,

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net