‘ಅಯಾನ್ ಶಾಂತಿ ಕುಟೀರ’ ನಾಟಕ ಪ್ರದರ್ಶನ

Drama-games
Published on

ಮೈಸೂರು: ಸಮತೆಂತೋ(ಸರಸ್ವತಿಪುರಂನ ಮಧ್ಯದ ತೆಂಗಿನ ತೋಪು) ಹವ್ಯಾಸಿ ರಂಗ ತಂಡ ವತಿಯಿಂದ ಏ.5ರಂದು ಸಂಜೆ 7 ಗಂಟೆಗೆ ಕಲಾಮಂದಿರ ಆವರಣದ ಕಿರು ರಂಗಮಂದಿರದಲ್ಲಿ ‘ಅಯಾನ್ ಶಾಂತಿ ಕುಟೀರ’ ನಾಟಕ ಪ್ರದರ್ಶನ ನಡೆಯಲಿದೆ.

ನಾಟಕದಲ್ಲಿನ ಮೂವರು ಪಾತ್ರದಾರಿಗಳು 85 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ಮಿಕ್ಕ ಅನೇಕರು 75 ವರ್ಷ ವಯಸ್ಸಿನವರು ಎಂಬುದು ವಿಶೇಷ. ಅಯಾನ್ ಶಾಂತಿ ಕುಟೀರ ಪ್ರೀತಿಯ ಆಸರೆ ಬಯಸುತ್ತಿರುವ, ಪ್ರೀತಿಗಾಗಿ ಹಪಹಪಿಸುತ್ತಿರುವ ಹಿರಿಯರಿಗಾಗಿಯೇ ಬರೆದ, ಹಿರಿಯರೇ ಆಡುತ್ತಿರುವ ನಾಟಕ. ಇದು ವೃದ್ಧಾಪ್ಯದ ವಿರಾಟ್ ದರ್ಶನ ಮಾಡಿಸುತ್ತದೆ. ಒಂದು ವೃದ್ಧಾಶ್ರಮದಲ್ಲಿ ನಡೆಯುವ ಈ ನಾಟಕ ದೇಶದ ಹಲವಾರು ಹಿರಿಯರ ಬದುಕನ್ನು ವಿಶ್ಲೇಷಿಸುತ್ತದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net