ಹೆದ್ದಾರಿ ಬದಿ ಮರಗಳಿಗೆ ಕೊಡಲಿಯೇಟು!

gan
Published on

ಕುಂದಾಪುರ: ಚತುಷ್ಪಥ ಹೆದ್ದಾರಿಯ ಸರ್ವೀಸ್ ರಸ್ತೆ ನಿರ್ವಾಣಕ್ಕಾಗಿ ಕೋಟೇಶ್ವರ, ಬೀಜಾಡಿ, ಕುಂಭಾಶಿ ಹೆದ್ದಾರಿ ಪಕ್ಕದಲ್ಲಿ ಬೆಳೆದು ನಿಂತಿರುವ ಅಪರೂಪದ ಸಸ್ಯಗಳ ತೆರವಿಗೆ ಹೆದ್ದಾರಿ ಇಲಾಖಾ ಮುನ್ನುಡಿ ಬರೆದಿದೆ.

ಹಸಿರುತ್ಥಾನ ಯೋಜನೆಗೆ ಹೊಡೆತ

ಚತುಷ್ಪಥ ಹೆದ್ದಾರಿ ನಿರ್ವಾಣಕ್ಕಾಗಿ ಸಹಸ್ರಾರು ಮರಗಳು ಬಲಿಯಾಗಿದ್ದವು. ಹೀಗಾಗಿ 2019ರಲ್ಲಿ ಅರಣ್ಯ ಇಲಾಖೆ ಹೆದ್ದಾರಿ ಹಸುರೀಕರಣ ಯೋಜನೆಯಡಿ 4,000ಕ್ಕೂ ಅಧಿಕ ಗಿಡಗಳನ್ನು ನೆಟ್ಟು ಪೋಷಣೆ ವಾಡಿತ್ತು. ಈ ಗಿಡಗಳು ಈಗ ಆಳೆತ್ತರಕ್ಕೆ ಸೊಂಪಾಗಿ ಬೆಳೆದು ನಿಂತಿವೆ. ನಾಗಸಂಪಿಗೆ, ವಾಗನಿ, ಹೊಳೆದಾಸವಾಳ, ಹಲಸು, ಹೊಂಗೆ, ಬಾದಾಮಿ, ಧೂಪ ಇತ್ಯಾದಿ ಗಿಡಗಳು ಕಳೆದ 4-5 ವರ್ಷದಲ್ಲಿ ಮರವಾಗಿ ಬೆಳೆದು ನಿಂತಿವೆ. ಹೀಗಾಗಿ ಹೆದ್ದಾರಿ ಸೌಂದರ್ಯ ಮತ್ತೆ ಮರುಕಳಿಸಿತ್ತು. ಹೆದ್ದಾರಿ ಸರ್ವೀಸ್ ರಸ್ತೆಗಾಗಿ ಬೆಳೆದು ನಿಂತಿರುವ ಈ ಮರಗಳನ್ನು ತೆರವು ಮಾಡಲಾಗುತ್ತಿದೆ.

ಚತುಷ್ಪಥ ಹೆದ್ದಾರಿ ನಿರ್ವಾಣಕ್ಕೆ ಸಹಸ್ರಾರು ಮರಗಳು ತೆರವಾದ ಬಳಿಕ 2019ರಲ್ಲಿ ಹೆದ್ದಾರಿ ಹಸುರೀಕರಣ ಯೋಜನೆಯಡಿ ಗಿಡ ನಾಟಿ ಆರಂಭಿಸಿದ್ದೆವು. ಹೆಚ್ಚಿನ ಗಿಡಗಳು ಮರಗಳಾಗಿ ಬೆಳೆದು ನಿಂತಿದೆ. ಬೀಜಾಡಿ, ಕೋಟೇಶ್ವರ ವ್ಯಾಪ್ತಿಯಲ್ಲಿ ಅಂದಾಜು 200ಕ್ಕೂ ಮಿಕ್ಕಿ ಮರಗಳು ಸರ್ವೀಸ್ ರಸ್ತೆಯ ನಿರ್ವಾಣಕ್ಕಾಗಿ ಮತ್ತೆ ತೆರವಾಗಲಿದೆ. ರಾವೇಂದ್ರ ನಾಯ್ಕ, ಆರ್.ಎಫ್‌ಒ ಕುಂದಾಪುರ ಕುಂಭಾಶಿ, ಬೀಜಾಡಿ, ಕೋಟೇಶ್ವರ ವ್ಯಾಪ್ತಿಯಲ್ಲಿ ಸರ್ವೀಸ್ ರಸ್ತೆ ನಿರ್ವಾಣ ಕಾರ್ಯ ಆರಂಭಗೊಂಡಿದೆ. ನೂರಾರು ಮರಗಳ ತೆರವಾಗಲಿದೆ. ದಾರಿಹೋಕರಿಗೆ, ಪಶುಪಕ್ಷಿಗಳಿಗೆ ಆಸರೆಯಾಗಿದ್ದ ಮರಗಳ ತೆರವು ನಿಜಕ್ಕೂ ಬೇಸರ ಮೂಡಿಸಿದೆ. ಅರಣ್ಯ ಇಲಾಖಾ ಅತಿ ಕಾಳಜಿ ವಹಿಸಿ ಬೆಳೆಸಿದ್ದ ಗಿಡಗಳು ಇಂದು ಮರವಾಗಿ ಬೆಳೆದು ನಿಂತಿವೆ. ಅಭಿವೃದ್ಧಿಗಾಗಿ ಮರಗಳನ್ನು ತೆರವು ಮಾಡುತ್ತಿರುವುದು ಖೇದಕರ. ಲೋಕೇಶ್, ಪರಿಸರ ಕಾರ್ಯಕರ್ತ

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net