ಗುರುವಿನಿಂದ ಅಂಧಕಾರ ದೂರ

Arkera Sree
ನೀಲಗಲ್ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದಲ್ಲಿ ಚಂಡಿಕಾ ಹೋಮ ನೆರವೇರಿಸಲಾಯಿತು. ಹಿರಿಯ ಶ್ರೀ ಡಾ.ಪಂಚಾಕ್ಷರ ಶಿವಾಚಾರ್ಯರು, ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು, ಆಡಳಿತಾಧಿಕಾರಿ ಶಾಂತಕುಮಾರ ಮಠದ್ ಇದ್ದರು.
Published on

ಅರಕೇರಾ: ಗುರು ಅಂದರೆ ಅಂಧಕಾರ ಅಥವಾ ಅಜ್ಞಾನವನ್ನು ದೂರ ಮಾಡುವವರು ಎಂದು ನೀಲಗಲ್ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದ ಹಿರಿಯ ಶ್ರೀ ಡಾ.ಪಂಚಾಕ್ಷರಿ ಶಿವಾಚಾರ್ಯರು ಹೇಳಿದರು.

ತಾಲೂಕಿನ ನೀಲಗಲ್ ಶ್ರೀ ಶಾಂಭವಿ ಶಾಂತಮಲ್ಲೇಶ್ವರ ಬೃಹನ್ಮಠದಲ್ಲಿ ಗುರುಪೂರ್ಣಿಮೆ ಪ್ರಯುಕ್ತ ಪಾದಪೂಜೆ, ಆಶಾಢ ಮಾಸದ ಕೊನೇ ಶುಕ್ರವಾರದ ಪೂಜೆ ಹಾಗೂ ಚಂಡಿಕಾ ಹೋಮ ಕಾರ್ಯಕ್ರಮದಲ್ಲಿ ಸಾನ್ನಿಧ್ಯವಹಿಸಿ ಮಾತನಾಡಿದರು. ಗುರುಪೂರ್ಣಿಮೆಗೆ ಧಾರ್ಮಿಕ ಪ್ರಾಮುಖ್ಯದ ಜತೆಗೆ ಶೈಕ್ಷಣಿಕ ಮಹತ್ವವೂ ಇದೆ. ಈ ದಿನ ಹಲವರು ತಮ್ಮ ಶಿಕ್ಷಕರಿಗೆ ಕೃತಜ್ಞತೆ ಮತ್ತು ವಿದ್ವಾಂಸರನ್ನು ಸ್ಮರಿಸುವ ಮೂಲಕ ಆಚರಿಸುತ್ತಾರೆ ಎಂದರು.

ಅಭಿನವ ರೇಣುಕ ಶಾಂತಮಲ್ಲ ಶಿವಾಚಾರ್ಯರು ಮಾತನಾಡಿ, ಧಾರ್ಮಿಕ ಕಾರ್ಯಗಳಿಂದ ಭಕ್ತರ ಮನಸ್ಸಲ್ಲಿ ಶ್ರೀಮಠ ನೆಲೆಸಿದೆ. ಸನ್ಮಾರ್ಗದಲ್ಲಿ ಕರೆದೊಯ್ಯುವ ಮಹತ್ತರ ಜವಾಬ್ದಾರಿ ಶ್ರೀಮಠಕ್ಕಿದೆ ಎಂದರು.

ಶ್ರೀ ಶಾಂಭವಿ ದೇವಿ ಸನ್ನಿಧಿಯಲ್ಲಿ ಕುಂಕುಮಾರ್ಚನೆ, ಚಂಡಿಕಾಹೋಮ, ಮಹಿಳೆಯರಿಂದ ನಿಂಬೆ ಹಣ್ಣಿನ ಆರತಿ ಸೇವೆ, ಅನ್ನಸಂತರ್ಪಣೆ ಸೇವೆ ಸೇರಿ ವಿವಿಧ ಧಾರ್ಮಿಕ ಕಾರ್ಯಗಳು ನೆರವೇರಿದವು. ಅಪಾರ ಭಕ್ತರು ಭಾಗವಹಿಸಿದ್ದರು. ಆಡಳಿತಾಧಿಕಾರಿ ಶಾಂತ ಕುಮಾರ ಮಠದ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net