ಯೋಗದಿಂದ ರೋಗ ದೂರ - ಅಬ್ದುಲರಜಾಕ ತಟಗಾರ ಅನಿಸಿಕೆ

ILKAL RURAL 20-02
ಇಳಕಲ್ಲದಲ್ಲಿ ಎಸ್.ಆರ್.ನವಲಿಹಿರೇಮಠ ಅಭಿಮಾನಿಗಳ ಸಂಘದಿಂದ ಆಯೋಜಿಸಿದ್ದ ಯೋಗ ತರಬೇತಿ ಕಾರ್ಯಕ್ರಮಕ್ಕೆ ಗಣ್ಯರು ಚಾಲನೆ ನೀಡಿದರು. ಗಿರೀಶ ಲದ್ವಾ, ಅಬ್ದುಲರಜಾಕ ತಟಗಾರ, ಬಸಪ್ಪ ಹೆಸರೂರ, ಅಶೋಕ ತೆಳಗಡೆ, ಬಸಮ್ಮ ಕರ್ಲಿ ಇದ್ದರು.
Published on

ಇಳಕಲ್ಲ(ಗ್ರಾ): ಯೋಗ ಮಾಡುವುದರಿಂದ ಮನುಷ್ಯನಿಗೆ ಯಾವುದೇ ರೋಗ ಬರುವುದಿಲ್ಲ ಎಂದು ಎಸ್.ಆರ್.ನವಲಿಹಿರೇಮಠ ಅಭಿಮಾನಿಗಳ ಸಂಘದ ತಾಲೂಕು ಅಧ್ಯಕ್ಷ ಅಬ್ದುಲರಜಾಕ ತಟಗಾರ ಹೇಳಿದರು.

ಇಲ್ಲಿಯ ಎಸ್. ಆರ್. ನವಲಿಹಿರೇಮಠ ಅವರ ಗೃಹ ಕಚೇರಿಯಲ್ಲಿ ಎಸ್. ಆರ್. ನವಲಿಹಿರೇಮಠ ಅಭಿಮಾನಿಗಳ ಸಂಘದ ನೇತೃತ್ವದಲ್ಲಿ ಯೋಗ ಉಚಿತ ತರಬೇತಿ ಶಿಬಿರವನ್ನು ಭಾನುವಾರ ಉದ್ಘಾಟಿಸಿ ಅವರು ಮಾತನಾಡಿದರು.

ಸೆ.25 ರವರೆಗೆ ತರಬೇತಿ ನಡೆಯಲಿದ್ದು, ಎಲ್ಲರಿಗೂ ಉಚಿತವಾಗಿ ಆರೋಗ್ಯ ಭಾಗ್ಯ ಸಿಗಲಿ ಎಂದು ಈ ಶಿಬಿರ ಏರ್ಪಡಿಸಲಾಗಿದೆ ಎಂದು ಹೇಳಿದರು.

ಯೋಗಪಟು ಗಿರೀಶ ಲದ್ವಾ ಶಿಬಿರದ ನೇತೃತ್ವ ವಹಿಸಿ ಮಾತನಾಡಿ, ಯೋಗದಿಂದ ಕೆಮ್ಮು, ದಮ್ಮು, ಪಿತ್ತ, ತಲೆನೋವು, ಸೊಂಟನೋವು, ಮೊಣಕಾಲು ನೋವು, ಬಿಪಿ, ಶುಗರ್, ಥೈರಾಯ್ಡ ಸೇರಿದಂತೆ ಇತರ ಕಾಯಿಲೆಗಳು ಗುಣವಾಗುತ್ತವೆ ಎಂದರು.

ಬಸಪ್ಪ ಹೆಸರೂರ, ಅಶೋಕ ತೆಳಗಡೆ, ನವೀನ ದೇವದುರ್ಗ, ಬಸಮ್ಮ ಕರ್ಲಿ ಇತರರಿದ್ದರು. ನಾಗರಾಜ್ ನಗರಿ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net