ಮೈಸೂರು ತಲುಪಿದ ಜಾಗೃತಿ ಪಾದಯಾತ್ರೆ

10
Published on

ಮೈಸೂರು: ಭ್ರಷ್ಟಾಚಾರ ಮುಕ್ತ ಚುನಾವಣೆಯ ಬಗ್ಗೆ ಜಾಗೃತಿ ಮೂಡಿಸಲು ಬಾಗಲಕೋಟೆ ಜಿಲ್ಲೆ ನವನಗರ ನಿವಾಸಿ ನಾಗರಾಜ್ ಕುಲಕುಟಗರ ವಿಧಾನಸೌಧ ಮುಂಭಾಗದಿಂದ ಆರಂಭಿಸಿರುವ ಜಾಗೃತಿ ಪಾದಯಾತ್ರೆ ಬುಧವಾರ ಮೈಸೂರು ತಲುಪಿತು.

ನಗರದ ಪುರಭವನದ ಮುಂಭಾಗ ಇರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮಂಭಾಗ ಏಕಾಂಗಿಯಾಗಿ ಕುಳಿತು ಸಾರ್ವಜನಿಕರಲ್ಲಿ ಅರಿವು ಮೂಡಿಸಿದರು.

ಕಳೆದ ಲೋಕಸಭೆ, ವಿಧಾನಸಭೆಯಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅವರು, ಆ ಸಮಯದಲ್ಲಿ ರಾಜಕಾರಣಿಗಳು ಮತಕ್ಕಾಗಿ ಹಣ ಹಂಚುತ್ತಿರುವುದನ್ನು ಕಂಡು ಈ ಕುರಿತು ಜಾಗೃತಿ ಮೂಡಿಸಲು ಎಲ್ಲ ಜಿಲ್ಲಾ ಕೇಂದ್ರಗಳಿಗೆ ಪಾದಯಾತ್ರೆ ನಡೆಸಲು ನಿರ್ಧರಿಸಿದರು. ಫೆ.16ರಂದು ಬೆಂಗಳೂರಿನ ವಿಧಾನಸಭೆ ಮುಂಭಾಗದಿಂದ ಪಾದಯಾತ್ರೆ ಈಗ 6 ಜಿಲ್ಲೆ ಕ್ರಮಿಸಿದೆ. ನಿತ್ಯ 15 ರಿಂದ 20 ಕಿ.ಮೀ ಕ್ರಮಿಸುತ್ತೇನೆ. ಜನರಿಗೆ ಪರ್ಯಾಯ ರಾಜಕಾರಣದ ಅರಿವು ಮೂಡಿಸುತ್ತಿದ್ದು, ಸ್ವಚ್ಛ ರಾಜಕಾರಣದ ಕುರಿತು ಮಾಹಿತಿ ನೀಡುತ್ತಿದ್ದೇನೆ. ಮೂರು ಹಂತಗಗಳಲ್ಲಿ ಈ ಆಂದೋಲನ ನಡೆಸಲಿದ್ದೇನೆ ಎಂದು ಹೇಳಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net