ವಿಶ್ವ ರಕ್ತದಾನಿಗಳ ದಿನ ನಿಮಿತ್ತ ಜಾಗೃತಿ ನಡಿಗೆ

h14-rastrothan
Published on

ಹುಬ್ಬಳ್ಳಿ: ವಿಶ್ವ ರಕ್ತದಾನಿಗಳ ದಿನ ನಿಮಿತ್ತ ರಾಷ್ಟ್ರೋತ್ಥಾನ ರಕ್ತ ಭಂಡಾರ ವತಿಯಿಂದ ನಗರದಲ್ಲಿ ಶನಿವಾರ ಜಾಗೃತಿ ನಡಿಗೆ ಕಾರ್ಯಕ್ರಮ ಏರ್ಪಡಿಸಲಾಗಿತ್ತು.

ರಕ್ತಕೇಂದ್ರದಿಂದ ಪ್ರಾರಂಭಗೊಂಡ ಜಾಗೃತಿಗಾಗಿ ನಡಿಗೆ ಕಾರ್ಯಕ್ರಮವು ಚನ್ನಮ್ಮ ಸರ್ಕಲ್, ಮುಖ್ಯ ಅಂಚೆ ಕಚೇರಿವರೆಗೆ ಹೋಗಿ ನಂತರ ಸಂಗೊಳ್ಳಿ ರಾಯಣ್ಣ ವೃತ್ತ, ಚನ್ನಮ್ಮನ ವೃತ್ತಕ್ಕೆ ಬಂದು ನಂತರ ರಕ್ತಕೇಂದ್ರಕ್ಕೆ ಮರಳಿತು.

ಕೆಎಲ್‌ಇ ನರ್ಸಿಂಗ್ ಕಾಲೇಜ್, ಭಾವದೀಪ ಸ್ಕೂಲ್, ಚಿನ್ಮಯ ಸ್ಕೂಲ್, ಕೇಶವ ವಿದ್ಯಾಕೇಂದ್ರ, ಆಯುರ್ವೇದ ಮಹಾವಿದ್ಯಾಲಯ, ಕೆಎಂಸಿಆರ್‌ಐ, ಅಶೋಕ ನರ್ಸಿಂಗ್ ಕಾಲೇಜ್, ಶಕುಂತಲಾ ನರ್ಸಿಂಗ್ ಕಾಲೇಜ್ ಸೇರಿದಂತೆ ಅನೇಕ ಶಾಲಾ-ಕಾಲೇಜ್‌ಗಳ ವಿದ್ಯಾರ್ಥಿ, ವಿಧ್ಯಾರ್ಥಿನಿಯರು ಮತ್ತು ಶಿಕ್ಷಕರು ಭಾಗವಹಿಸಿದ್ದರು.

ನಂತರ ರಾಷ್ಟ್ರೋತ್ಥಾನ ರಕ್ತ ಕೇಂದ್ರದಲ್ಲಿ ಆಯೋಜಿಸಿದ್ದ ಕಾರ್ಯಕ್ರಮವನ್ನು ಶ್ರೀ ಬಸವಾನಂದ ಸ್ವಾಮೀಜಿ ರಕ್ತದಾನ ಮಾಡುವುದರ ಮೂಲಕ ಚಾಲನೆ ನೀಡಿದರು. ಶ್ರೀಗಳು 108ನೇ ಬಾರಿ ರಕ್ತದಾನ ಮಾಡಿದರೆ, ರಾಷ್ಟ್ರೋತ್ಥಾನ ರಕ್ತ ಭಂಡಾರದ ಮುಖ್ಯಸ್ಥ ದತ್ತಮೂರ್ತಿ ಕುಲಕರ್ಣಿ ಅವರು 80ನೇ ಬಾರಿ ರಕ್ತದಾನ ಮಾಡಿದರು. ಕೇಶ್ವ ವಿದ್ಯಾಕೇಂದ್ರದ ಪ್ರಮುಖ ಶ್ರೀಧರ ಜೋಶಿ, ರಕ್ತ ಕೇಂದ್ರದ ಅಭಿವೃದ್ಧಿ ಸಮಿತಿಯ ವಿನೋದಕುಮಾರ ಪಟ್ವಾ, ಇತರರು ರಕ್ತದಾನ ಮಾಡಿದರು.

ಶಾಸಕ ಮಹೇಶ ಟೆಂಗಿನಕಾಯಿ, ಕ್ಷಮತಾ ಸೇವಾ ಸಂಸ್ಥೆ ಸಂಚಾಲಕ ಗೋವಿಂದ ಜೋಶಿ, ಸ್ವರ್ಣ ಸಮೂಹ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕ ಡಾ.ವಿ.ಎಸ್.ವಿ. ಪ್ರಸಾದ, ಪ್ರಮುಖರಾದ ಎಸ್.ಡಿ. ಬೆಲ್ಲದ, ವೀರೇಂದ್ರ ಛೇಡಾ ಇತರರು ಆಗಮಿಸಿದ್ದರು. ಗುರು ಬನ್ನಿಕೊಪ್ಪ ನಿರ್ವಹಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net