ಜಿಲ್ಲಾ ಪೊಲೀಸರಿಂದ ನಗರದಲ್ಲಿ ಜಾಗೃತಿ ನಡಿಗೆ

10-03-Shiva-1
ಕರ್ನಾಟಕ ಸುವರ್ಣ ಮಹೋತ್ಸವ ನಿಮಿತ್ತ ರಾಯಚೂರಿನ ಪ್ರಮುಖ ಬೀದಿಗಳಲ್ಲಿ ಜಿಲ್ಲಾ ಪೊಲೀಸ್ ಇಲಾಖೆಯಿಂದ ಭಾನುವಾರ ಜಾಗೃತಿ ನಡಿಗೆ ನಡೆಸಲಾಯಿತು. ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್, ಡಿವೈಎಸ್ಪಿ ಸತ್ಯನಾರಾಯಣ, ಸಿಪಿಐ ಉಮೇಶ ಕಾಂಬ್ಳೆ ಹಾಗೂ ಸಾರ್ವಜನಿಕರು ಪಾಲ್ಗೊಂಡಿದ್ದರು.
Published on

ರಾಯಚೂರು: ಕರ್ನಾಟಕ ಸುವರ್ಣ ಮಹೋತ್ಸವದ ನಿಮಿತ್ತ ಜಿಲ್ಲಾ ಪೊಲೀಸ್ ಇಲಾಖೆಯಿಂದ ನಗರದ ಎಸ್ಪಿ ಕಚೇರಿಯಿಂದ ಪ್ರಮುಖ ಬೀದಿಗಳ ಮೂಲಕ ಜಿಲ್ಲಾ ಕ್ರೀಡಾಂಗಣದವರೆಗೆ ಜಾಗೃತಿ ನಡಿಗೆ ನಡೆಸಲಾಯಿತು.
ಜಾಗೃತಿ ನಡಿಗೆಗೆ ಜಿಲ್ಲಾ ಪೊಲೀಸ್ ವರಿಷ್ಠಾಕಾರಿ ಬಿ.ನಿಖಿಲ್ ಚಾಲನೆ ನೀಡಿ ಮಾತನಾಡಿ, ಪೊಲೀಸ್ ಇಲಾಖೆಗೆ 50 ವರ್ಷ ತುಂಬಿದ ಹಿನ್ನೆಲೆಯಲ್ಲಿ ವಾಕಾಥಾನ್ ಹಮ್ಮಿಕೊಳ್ಳಲಾಗಿದ್ದು, ರಾಜ್ಯಾದ್ಯಂತ ಜಾಥಾ ಕಾರ್ಯಕ್ರಮ ನಡೆಸುವ ಮೂಲಕ ವ್ಯಸನ ಮುಕ್ತ ಮತ್ತು ಅಪರಾಧ ಮುಕ್ತ ಸಮಾಜ ನಿರ್ಮಾಣದ ಬಗ್ಗೆ ಜಾಗೃತಿ ಮೂಡಿಸಲಾಗುತ್ತಿದೆ.
ರಾಮೇಶ್ವರಂ ಕೆೆ ಬಾಂಬ್ ಸ್ಪೋಟ ಪ್ರಕರಣಕ್ಕೆ ಸಂಬಂಸಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ಬಾಂಬರ್ ಓಡಾಟ ನಡೆಸಿದ ಸುಳಿವಿನ ಹಿನ್ನೆಲೆಯಲ್ಲಿ ಜನರಲ್ಲಿ ಭದ್ರತೆ ಭಾವನೆ ಮೂಡಿಸಲಾಗುತ್ತಿದ್ದು, ಮೇಲಾಕಾರಿಗಳಿಂದ ಯಾವುದೇ ವಿಶೇಷ ಸಂದೇಶವಿಲ್ಲದಿದ್ದರೂ ನಾವು ಎಚ್ಚರಿಕೆ ಕ್ರಮಕೈಗೊಂಡಿದ್ದೇವೆ ಎಂದು ಹೇಳಿದರು.
ಈ ಸಂದರ್ಭದಲ್ಲಿ ಡಿವೈಎಸ್ಪಿ ಸತ್ಯನಾರಾಯಣ, ಸಿಪಿಐ ಉಮೇಶ ಕಾಂಬ್ಳೆ ಹಾಗೂ ವಿವಿಧ ಠಾಣೆಗಳ ಸಿಪಿಐಗಳು, ಸ್ವಯಂ ಸೇವಾ ಸಂಸ್ಥೆಗಳ ಪ್ರತಿನಿಗಳು ಉಪಸ್ಥಿತರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net