

ಕೆ.ಆರ್.ಪೇಟೆ: ಸಾರ್ವಜನಿಕ ಆಸ್ಪತ್ರೆಯ ಸಭಾಂಗಣದಲ್ಲಿ ಕೆ.ಆರ್.ಪೇಟೆ ತಾಲೂಕು ಸಮಾಜ ಕಲ್ಯಾಣ ಇಲಾಖೆ ಮತ್ತು ಹಿಂದುಳಿದ ವರ್ಗಗಳ ಇಲಾಖೆ ಅಲ್ಪಸಂಖ್ಯಾತರ ಇಲಾಖೆ ಹಾಗೂ ವಸತಿ ಶಾಲೆಗಳ ವಾರ್ಡನ್‌ಗಳು ಮತ್ತು ಅಡುಗೆ ಸಿಬ್ಬಂದಿಗೆ ಡೆಂಘೆ ಜ್ವರ ನಿಯಂತ್ರಣದ ಬಗ್ಗೆ ಅಡ್ವೊಕೆಸಿ ಕಾರ್ಯಾಗಾರ ನಡೆಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ತಾಲೂಕು ಆರೋಗ್ಯ ಅಧಿಕಾರಿ ಡಾ.ಜೆ.ಅಜಿತ್ ಅವರು, ಹಾಸ್ಟೆಲ್‌ಗಳ ಹೊರಾಂಗಣದಲ್ಲಿ ಮತ್ತು ಒಳಾಂಗಣದಲ್ಲಿ ನೀರು ನಿಲ್ಲದಂತೆ ಕ್ರಮವಹಿಸಲು ತಿಳಿಸಿ ಹಾಸ್ಟೆಲ್‌ಗಳ ಕಿಟಕಿಗಳಿಗೆ ಮೆಶ್‌ಗಳನ್ನು ಅಳವಡಿಸಲು, ವಿದ್ಯಾರ್ಥಿಗಳಿಗೆ ಮಲಗುವಾಗ ಸೊಳ್ಳೆಪರದೆ ಉಪಯೋಗಿಸುವಂತೆ ತಿಳಿಸಿದರು.
ಸಾರ್ವಜನಿಕ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ಮಂಜುಳಾ ಮಾತನಾಡಿ, ಡೆಂಘೆ ಜ್ವರ ಬಂದ ನಂತರ ತೆಗೆದುಕೊಳ್ಳಬಹುದಾದ ಮುನ್ನೆಚ್ಚರಿಕೆ ಮತ್ತು ಚಿಕಿತ್ಸೆಯ ಬಗ್ಗೆ ಮಾಹಿತಿ ನೀಡಿದರು. ಜಿಲ್ಲಾ ಆರೋಗ್ಯ ಮೇಲ್ವಿಚಾರಣಾ ಅಧಿಕಾರಿ ಬಸವರಾಜು, ಧರ್ಮೇಂದ್ರ, ನಾಗೇಂದ್ರ, ಸತೀಶ್, ನವೀನ್, ಕಚೇರಿಯ ವ್ಯವಸ್ಥಾಪಕ ವಿನಯ್, ರೇಖಾ,ರವಿ ಇದ್ದರು.