

ರಾಯಚೂರು ಇಲ್ಲಿನ ಜಿ¯್ಲÁಡಳಿತ, ಜಿ¯್ಲÁ ಪಂಚಾಯತï, ಜಿ¯್ಲÁ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿ¯್ಲÁ ರೋಗವಾಹಕ ಆಶ್ರೀತ ರೋಗಗಳ ನಿಯಂತ್ರಣ ವಿಭಾಗದಿಂದ ವಿಶ್ವ ಮಲೇರಿಯಾ ದಿನಾಚರಣೆ ಅಂಗವಾಗಿ ಇತ್ತಿಚ್ಚಿಗೆ ನಗರದ ಪ್ರಮುಖ ರಸ್ತೆಗಳಲ್ಲಿ ಜÁಥಾವನ್ನು ಜರುಗಿಸಲಾಯಿತು.
ಜಾಥದಲ್ಲಿ ತಾಲೂಕು ವಿಬಿಡಿ ತಾಂತ್ರಿಕ ಮೇಲ್ವಿಚಾರಕರಾದ ಸಂಧ್ಯಾ ನಾಯಕ ಮಾತನಾಡಿ, ಸೊಳ್ಳೆ ನಿಯಂತ್ರಣ ಕ್ರಮಗಳು ಮನೆಯೊಳಗೆ ಮತ್ತು ಮೇಲ್ಛಾವಣಿಯ ನೀರಿನ ತೊಟ್ಟಿಗಳಲ್ಲಿನ ನೀರನ್ನು ವಾರಕ್ಕೊಮ್ಮೆ ನೀರನ್ನು ಖಾಲಿ ಮಾಡಿ, ಉಜ್ಜಿ, ಒಣಗಿಸಿ ಮತ್ತೆ ತುಂಬುವುದು ಭದ್ರವಾಗಿ ಮುಚ್ಚಳಿಕೆಯಿಂದ ಮುಚ್ಚುವುದು, ಮನೆಯ ಒಳಗೆ ಹಾಗೂ ಹೊರಗೆ ಯಾವುದೇ ಕಾರಣಕ್ಕೂ ಮಳೆ ನೀರು ನಿಲ್ಲದಂತೆ ಎಚ್ಚರ ವಹಿಸಬೇಕು. ಒಡೆದ ಬಾಟಲಿ, ಟಿನï, ಟೈರು, ತೆಂಗಿನ ಚಿಪ್ಪು, ಇತ್ಯಾದಿಗಳಲ್ಲಿ ನೀರು ಸಂಗ್ರಹವಾಗದಅತೆ ನೋಡಿಕೊಳ್ಳಬೇಕು ಮತ್ತು ಚರಂಡಿಗಳಲ್ಲಿ ನೀರು ನಿಲ್ಲದಂತೆ ಎಚ್ಚರವಹಿಸಬೇಕು ಎಂದರು.
ರೋಗ ಪತ್ತೆಹಚ್ಚುವ ಮತ್ತು ಚಿಕಿತ್ಸೆಯ ಸೌಲಭ್ಯಗಳು ಎ¯್ಲÁ ಸರ್ಕಾರಿ ಆಸ್ಪತ್ರೆಗಳಲ್ಲಿ ಉಚಿತವಾಗಿ ಲಭ್ಯವಿರುತ್ತದೆ. ಮಲೇರಿಯಾ ನಮ್ಮೊಂದಿಗೆ ಕೊನೆಗೊಳ್ಳುತ್ತದೆ ಮರು ಹೂಡಿಕೆ ಮಾಡಿ, ಮರು ಕಲ್ಪನೆ, ಮರು ಉತ್ತೇಜನ ನೀಡೋಣ ಎಂಬುದು ಈ ವರ್ಷದ ಘೋಷಣೆ ಎಂದರು.
ಈ ಸಂದರ್ಭದಲ್ಲಿ ಹಿರಿಯ ಆರೋಗ್ಯ ನಿರೀಕ್ಷಣಾಽಕಾರಿ ಮಾನಯ್ಯ, ಎಲ್‌ಟಿಓ ಜಿ¯್ಲÁ ಹಿರಿಯ ನೋಡೆಲï ಅಡಿವೆಪ್ಪ, ಆರೋಗ್ಯ ನಿರೀಕ್ಷಣಾಽಕಾರಿ ಅಶೊಕ ಪಾಟಿಲï, ಮಹೇಶ ಎಂ, ಸಾಲ್ವಿನ ಜಿ, ನಗರ ಪ್ರಾಥಮಿಕ ಆರೋಗ್ಯ ಕೇಂದ್ರ ಪಿಹೆಚ್‌ಸಿಓ, ಎಸ್‌ಕೆಇ ಪ್ಯಾರಾಮೇಡಿಕಲï ಕಾಲೇಜಿನ ಪ್ರಾಂಶುಪಾಲರು, ವಿದ್ಯಾರ್ಥಿಗಳು ಹಾಗೂ ಆಶಾ ಕಾರ್ಯಕರ್ತೆಯರು ಇದ್ದರು.