ಮಹಿಳೆಯರಲ್ಲಿ ಅರಿವು ಮೂಡಿಸುವ ಕಾರ್ಯ

samavesha-1
Published on

ಕುಂದಾಪುರ: ಒಂದು ಕುಟುಂಬದ ಸಾರಥಿಯೆಂದರೆ ಮಹಿಳೆ. ಗ್ರಾಮಾಭಿವೃದ್ಧಿ ಯೋಜನೆ ಸ್ತ್ರೀಯರಲ್ಲಿ ಸ್ವಾಲವಂಬನೆ ತರುವಲ್ಲಿ ಮಹತ್ತರ ಪಾತ್ರ ವಹಿಸಿದೆ. ಅವರಲ್ಲಿ ಎಲ್ಲ ರೀತಿಯಿಂದಲೂ ಅರಿವು ಮೂಡಿಸುವ ಕಾರ‌್ಯ ಆಗುತ್ತಿದೆ ಎಂದು ತಲ್ಲೂರು ಶ್ರೀ ಮಹಾಲಿಂಗೇಶ್ವರ ದೇವಸ್ಥಾನ ಆಡಳಿತ ಮೊಕ್ತೇಸರ ವಸಂತ ಆರ್. ಹೆಗ್ಡೆ ಹೇಳಿದರು.

ತಲ್ಲೂರಿನಲ್ಲಿ ಭಾನುವಾರ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಬಿ.ಸಿ. ಟ್ರಸ್ಟ್ ಕುಂದಾಪುರ, ತಾಲೂಕು ಜ್ಞಾನ ವಿಕಾಸ ಕೇಂದ್ರಗಳ ಸಹಯೋಗದಲ್ಲಿ ತಾಲೂಕುಮಟ್ಟದ ಮಹಿಳಾ ಸಮಾವೇಶ ಹಾಗೂ ವಿಚಾರಗೋಷ್ಠಿ ಉದ್ಘಾಟಿಸಿ ಮಾತನಾಡಿದರು.

ಕೇಂದ್ರ ಸಮಿತಿ ಉಪಾಧ್ಯಕ್ಷ ಶಶಿಧರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಉಡುಪಿ ಸಮಾಜ ಶಿಕ್ಷಣ ಸಂಸ್ಥೆಗಳ ಸಹ ಪ್ರಾಧ್ಯಾಪಕಿ ಅರ್ಪಿತಾ ಪ್ರಶಾಂತ್ ಶೆಟ್ಟಿ ಕಟಪಾಡಿ ಆಧುನಿಕತೆಯ ಪ್ರವಾಹದಲ್ಲಿ ಮಹಿಳೆ ಮತ್ತು ಕುಟುಂಬ ವಿಷಯದ ಕುರಿತು ವಿಚಾರ ಮಂಡಿಸಿದರು.

ತಲ್ಲೂರು ಗ್ರಾಪಂ ಅಧ್ಯಕ್ಷ ಗಿರೀಶ್ ಎಸ್. ನಾಯ್ಕ, ವಕೀಲ ಟಿ.ಬಿ. ಶೆಟ್ಟಿ, ತಲ್ಲೂರು ಚರ್ಚ್ ಪಾಲನಾ ಮಂಡಳಿ ಕಾರ‌್ಯದರ್ಶಿ ರೀನಾ ಮೆಂಡೊನ್ಸಾ, ತಾಲೂಕು ಜನಜಾಗೃತಿ ವೇದಿಕೆ ಸದಸ್ಯ ಭಾಸ್ಕರ ಆಚಾರ್ಯ, ತಲ್ಲೂರು ವಲಯಾಧ್ಯಕ್ಷರಾದ ಗೀತಾಂಬ, ವಿಕ್ರಂ, ಮತ್ತಿತರರು ಉಪಸ್ಥಿತರಿದ್ದರು. ತಲ್ಲೂರು ಮೇಲ್ವಿಚಾರಕಿ ನಾಗರತ್ನ ಸ್ವಾಗತಿಸಿದರು. ಕೃಷಿ ಅಧಿಕಾರಿ ಸಂಜು ವಂದಿಸಿದರು. ಪಾರ್ವತಿ ಪ್ರಸ್ತಾವನೆಗೈದರು. ರೇಣುಕಾ ಕೊಡಪದವು ವರದಿ ಮಂಡಿಸಿದರು. ರಮೇಶ್ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net