ಭ್ರಷ್ಟಾಚಾರ ಪ್ರಶ್ನಿಸುವ ಪ್ರವೃತ್ತಿ : ಡಾ.ಗಾನಾ ಪಿ.ಕುಮಾರ್ ಕಿವಿಮಾತು

Published on

ಸುಳ್ಯ: ಭ್ರಷ್ಟಾಚಾರವನ್ನು ಆರಂಭದಲ್ಲೇ ಚಿವುಟುವ ಕೆಲಸಕ್ಕೆ ಸರ್ವರೂ ಮುಂದಾದರೆ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾಧ್ಯ ಎಂದು ಲೋಕಾಯುಕ್ತ ಡಿವೈಎಸ್‌ಪಿ ಡಾ.ಗಾನಾ ಪಿ.ಕುಮಾರ್ ಹೇಳಿದರು.

ಮಂಗಳೂರು ಲೋಕಾಯುಕ್ತ ವತಿಯಿಂದ ಸುಳ್ಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ನಡೆದ ಜಾಗೃತಿ ಅರಿವು ಸಪ್ತಾಹ ಉದ್ಘಾಟಿಸಿ ಮಾತನಾಡಿ, ಯುವಜನತೆ ಭ್ರಷ್ಟಾಚಾರವನ್ನು ಪ್ರಶ್ನಿಸುವ ಪ್ರವೃತ್ತಿ ಬೆಳೆಸಿಕೊಳ್ಳಬೇಕಲ್ಲದೆ, ಭ್ರಷ್ಟಾಚಾರದ ವಿರುದ್ಧ ಎಚ್ಚೆತ್ತುಕೊಂಡು ಸೆಟೆದು ನಿಲ್ಲಬೇಕು ಎಂದು ಕಿವಿಮಾತು ಹೇಳಿದರು.

ಭ್ರಷ್ಟಾಚಾರ ವಿರೋಧಿ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಭ್ರಷ್ಟಾಚಾರ ವಿರೋಧಿ ಜಾಗೃತಿ ಮೂಡಿಸುವ ಪ್ರಬಂಧ, ರೀಲ್ಸ್ಗಳ ಸ್ಪರ್ಧೆ ಆಯೋಜಿಸಿ ಬಹುಮಾನ ವಿತರಿಸಲಾಯಿತು.

ಪ್ರಾಂಶುಪಾಲ ಸತೀಶ್ ಕುಮಾರ್ ಕೆ.ಆರ್. ಅಧ್ಯಕ್ಷತೆ ವಹಿಸಿದ್ದರು. ಲೋಕಾಯುಕ್ತ ನಿರೀಕ್ಷಕರಾದ ಸುರೇಶ್ ಕುಮಾರ್ ಪಿ., ಚಂದ್ರಶೇಖರ್ ಕೆ.ಎನ್., ಐಕ್ಯೂಎಸಿ ಸಂಚಾಲಕ ಡಾ.ಜಯಶ್ರೀ ಕೆ, ರಾಷ್ಟ್ರೀಯ ಸೇವಾ ಯೋಜನೆಯ ಕಾರ್ಯಕ್ರಮ ಅಧಿಕಾರಿ ರಾಮಕೃಷ್ಣ ಕೆ.ಎಸ್. ಉಪಸ್ಥಿತರಿದ್ದರು. ಪಂಚಮಿ ಸ್ವಾಗತಿಸಿದರು. ದಿವ್ಯ ಜ್ಯೋತಿ ವಂದಿಸಿದರು. ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net