

ದೇವನಹಳ್ಳಿ: ಪ್ರತಿಯೊಬ್ಬರೂ ಮುಂಜಾಗರೂಕತೆಯಿಂದ ಎಚ್ಚರವಹಿಸಿದರೆ ಏಡ್ಸ್ ಮಹಾಮಾರಿಯನ್ನು ಹಿಮ್ಮೆಟ್ಟಿಸಬಹುದು ಎಂದು ಚಿಕ್ಕಜಾಲ ಆಸ್ಪತ್ರೆ ವೈದ್ಯ ಡಾ. ಬಾಲಕೃಷ್ಣ ಹೇಳಿದರು. ತಾಲೂಕಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಸಮೀಪದ ಐಐಬಿಎಸ್ ಕಾಲೇಜಿನಲ್ಲಿ ಏಡ್ಸ್ ತಡೆ ಕುರಿತು ಹಮ್ಮಿಕೊಂಡಿದ್ದ ಜಾಗೃತಿ ಕಾರ್ಯಕ್ರಮದಲ್ಲಿ ಮಾತನಾಡಿದರು. ಚಿಕ್ಕಜಾಲ ವಿಭಾಗದ ವೈದ್ಯಾಧಿಕಾರಿ ಡಾ. ವಿದ್ಯಾಸುಂದರ್ ಮಾತನಾಡಿ, ಏಡ್ಸ್ ಕುರಿತು ಪ್ರತಿಯೊಬ್ಬರೂ ಎಚ್ಚರವಹಿಸಿದರೆ ಉತ್ತಮ ಜೀವನ ನಡೆಸಲು ಸಾಧ್ಯ ಎಂದರು. ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಚಿಕ್ಕಜಾಲ ಎಚ್.ಎನ್. ಚಂದ್ರು, ಪ್ರಾಂಶುಪಾಲ ಡಾ. ತ್ರಿಪುರನೇನಿ ಜಗ್ಗಯ್ಯ, ಎನ್.ಎಸ್.ಎಸ್ ಅಧಿಕಾರಿ ಮುನಿಆಂಜಿನಪ್ಪ ಮತ್ತಿತರರು ಇದ್ದರು.