ಆರೋಗ್ಯದ ಕುರಿತು ಜಾಗೃತಿವಹಿಸಿ

03raju9
Published on

ಚಾಮರಾಜನಗರ: ಉತ್ತಮ ಆರೋಗ್ಯ ಪಡೆದುಕೊಳ್ಳುವುದು ಪ್ರತಿಯೊಬ್ಬರ ಜತೆ ಜವಾಬ್ದಾರಿಯಾಗಿದೆ ಎಂದು ನಗರಸಭಾ ಸದಸ್ಯ ಅಬ್ರಾರ್ ಅಹಮ್ಮದ್ ತಿಳಿಸಿದರು.

ನಗರದ ಕೆ.ಪಿ.ಮೊಹಲ್ಲಾದಲ್ಲಿರುವ ಸರ್ಕಾರಿ ಉರ್ದು ಮೇನ್ ಶಾಲೆಯಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಹಾಗೂ ನಗರ ಆರೋಗ್ಯ ಕೇಂದ್ರ ಸಹಯೋಗದಲ್ಲಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರ ಉದ್ಘಾಟಿಸಿ ಮಾತನಾಡಿದರು.

ಅನಾರೋಗ್ಯ ಎನ್ನುವುದು ವಿಧಿಯ ಆಟವಲ್ಲ, ಉತ್ತಮ ಆರೋಗ್ಯ ಬೇಕು, ಬೇಡ ಎಂಬುವುದು ಸ್ವತಃ ನಾವು ನಿರ್ಧರಿಸಿಕೊಳ್ಳಬೇಕಾಗಿದೆ. ನಮ್ಮ ಆರೋಗ್ಯ, ನಮ್ಮ ಜವಾಬ್ದಾರಿ ಎಂಬುವುದನ್ನು ನಾವು ಅರಿತು ಕೊಂಡರೆ ಮಾತ್ರ ಆರೋಗ್ಯವನ್ನು ಕಾಪಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಉತ್ತಮ ಆರೋಗ್ಯಕ್ಕಾಗಿ ಉತ್ತಮ ಆಹಾರ, ಉತ್ತಮ ಪರಿಸರ ಹಾಗೂ ವ್ಯಾಯಾಮ ಇತ್ಯಾದಿಗಳ ಕುರಿತು ಜಾಗೃತಿವಹಿಸಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಡಾ.ನಾರಾಯಣ್, ಸೀರೋಗ ತಜ್ಞೆ ಡಾ.ಉಮಾರಾಣಿ, ಪ್ರಸೂತಿ ತಜ್ಞೆ ಡಾ.ಮಮತ, ಪಾರ್ವತಮ್ಮ, ಜ್ಯೋತಿ, ಸುಧರಾಣಿ, ಪ್ರಯೋಗ ತಜ್ಞ ಪ್ರದೀಪ್, ಇರ್ಫಾನ್ ಆಹಮ್ಮದ್, ಧಾರ್ಮಿಕ ಗುರು ಮೊಹಮದ್ ಶಾಹೀದ್ ಮೌಲಾನ ಉಪಸ್ಥಿರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net