ತಂಬಾಕು ರಹಿತ ದಿನ ನಿಮಿತ್ತ ಜಾಗೃತಿ

h31-cancer
Published on

ಹುಬ್ಬಳ್ಳಿ: ವಿಶ್ವ ತಂಬಾಕು ರಹಿತ ದಿನ ನಿಮಿತ್ತ ಸರ್ಜಿಕಲ್ ಅಂಕಾಲಜಿ ವಿಭಾಗದಿಂದ ಇಲ್ಲಿಯ ಕೆಎಂಸಿಆರ್‌ಐ ಆವರಣದಲ್ಲಿ ಶನಿವಾರ ಜಾಗೃತಿ ರ‌್ಯಾಲಿ ಏರ್ಪಾಟಾಗಿತ್ತು.

ಕೆಎಂಸಿಆರ್‌ಐ ನಿರ್ದೇಶಕ ಡಾ. ಎಸ್.ಎಫ್. ಕಮ್ಮಾರ ಮಾತನಾಡಿ, ತಂಬಾಕು ಸೇವನೆಯಿಂದ ಆರೋಗ್ಯದ ಜತೆಗೆ ಆರ್ಥಿಕ ಹಿನ್ನಡೆಯೂ ಉಂಟಾಗಲಿದೆ. ತಂಬಾಕು ಸೇವನೆಗೆ ಯುವಕರೇ ಮುಂದಾಗುತ್ತಿರುವುದು ಕಳವಳ ಮೂಡಿಸಿದೆ. ಜಾಗೃತಿಯಿಂದ ಮಾತ್ರ ತಂಬಾಕು ತಿನ್ನುವುದನ್ನು ಬಿಡಲು ಹೇಳಿಕೊಡಬಹುದು ಎಂದರು.

ಪ್ರಾಚಾರ್ಯ ಡಾ. ಗುರುಶಾಂತಪ್ಪ ಯಲಗಚ್ಚಿನ ಮಾತನಾಡಿ, ತಂಬಾಕು ಸೇವನೆಗೆ ಬಹಳಷ್ಟು ಯುವಕರು ದಾಸರಾಗುತ್ತಿದ್ದಾರೆ. ಇದರಿಂದ ಕುಟುಂಬಗಳು ನೆಮ್ಮದಿ ಕಳೆದುಕೊಳ್ಳುತ್ತಿವೆ. ಜಾಗೃತಿ ಮೂಲಕ ಯುವ ಜನಾಂಗಕ್ಕೆ ತಿಳಿವಳಿಕೆ ಮೂಡಿಸಬಹುದು ಎಂದರು.

ಸರ್ಜಿಕಲ್ ಅಂಕಾಲಜಿ ವಿಭಾಗದ ಮುಖ್ಯಸ್ಥ ಡಾ. ಕೆ. ಶಶಿಧರ ಮಾತನಾಡಿ, ತಂಬಾಕು ಸೇವನೆಯಿಂದ ಬರೀ ಕ್ಯಾನ್ಸರ್ ಮಾತ್ರವಲ್ಲ ಬಹಳಷ್ಟು ರೋಗಗಳು ಬರಲಿವೆ. ಇದನ್ನು ಅರಿತು ತಂಬಾಕು ಸೇವನೆಯಿಂದ ದೂರ ಉಳಿಯಬೇಕು ಎಂದು ಸಲಹೆ ನೀಡಿದರು.

ವೈದ್ಯಕೀಯ ಅಧೀಕ್ಷಕರಾದ ಡಾ. ಈಶ್ವರ ಹಸಬಿ, ಡಾ. ರಾಜಾಶಂಕರ ಎಸ್., ಇತರರು ರ‌್ಯಾಲಿಯಲ್ಲಿ ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net