ಕರೊನಾ ಕಾಲದಲ್ಲಿ ಆಯುರ್ವೆದ ಮಹತ್ವದ ಅರಿವು

h12-ayurveda
Published on

ಹುಬ್ಬಳ್ಳಿ: ಆಯುರ್ವೆದ ಮಹತ್ವವು ಕರೊನಾ ಕಾಲದಲ್ಲಿ ವಿಶ್ವಕ್ಕೆ ಮನವರಿಕೆಯಾಗಿದೆ. ಆಪತ್ಕಾಲದಲ್ಲಿಯೂ ನಮ್ಮ ಅತ್ಯಂತ ಪ್ರಮುಖ ಗಿಡಮೂಲಿಕೆಗಳು ಉಪಯೋಗವಾಗಿವೆ ಎಂದು ಖ್ಯಾತ ಆಯುರ್ವೆದ ತಜ್ಞ ಡಾ. ಗಿರಿಧರ ಕಜೆ ಹೇಳಿದರು.

ಇಲ್ಲಿನ ಹೆಗ್ಗೇರಿಯ ಆಯುರ್ವೆದ ಮಹಾವಿದ್ಯಾಲಯದಲ್ಲಿ ಶನಿವಾರ ಏರ್ಪಡಿಸಿದ್ದ 2017ನೇ ಶೈಕ್ಷಣಿಕ ವರ್ಷದ ವಿದ್ಯಾರ್ಥಿಗಳ ಹಾಗೂ 2019ನೇ ಸಾಲಿನ ಸ್ನಾತಕೋತ್ತರ ವಿದ್ಯಾರ್ಥಿಗಳ ಪದವಿ ಪ್ರದಾನ ಸಮಾರಂಭ ಹಾಗೂ ಘಟಿಕೋತ್ಸವವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಯಾವುದೇ ಚಿಕಿತ್ಸೆಗೆ ಆಯುರ್ವೆದದಲ್ಲಿ ಔಷಧ ಇಲ್ಲವೆಂದು ಹೇಳಲು ಸಾಧ್ಯವೇ ಇಲ್ಲ. ಇದಕ್ಕೆ ಉದಾಹರಣೆಯಾಗಿ ಚನೋಬಿಲ್ ದುರಂತದಲ್ಲಿ ರಷ್ಯಾ ದೇಶವು ಆಯುರ್ವೆದ ಪದ್ಧತಿ ಪ್ರಯೋಗಿಸಿ ಸಾವಿರಾರು ರೋಗಿಗಳನ್ನು ರಕ್ಷಿಸಿತು. ಆಯುರ್ವೆದ ಶಾಸ್ತ್ರಕ್ಕೆ ರಷ್ಯಾದಲ್ಲಿ ಆಯುರ್ವೆದ ಕಾಲೇಜ್ ಪ್ರಾರಂಭಿಸುವ ಮೂಲಕ ತನ್ನ ಅಭಿಮಾನವನ್ನು ತೋರಿಸಿದ ಇತಿಹಾಸವು ಅಚ್ಚಳಿಯದೇ ಉಳಿದಿದೆ ಎಂದರು.

ಹುಬ್ಬಳ್ಳಿ ಆಯುರ್ವೆದ ಸೇವಾ ಸಮಿತಿ ಅಧ್ಯಕ್ಷ ಗೋವಿಂದ ಜೋಶಿ ಮಾತನಾಡಿ, ಅರಣ್ಯ ಸಂಪತ್ತು ಕಾಪಾಡುವುದರಿಂದ ಆಯುರ್ವೆದ ಪದ್ಧತಿ ಜೀವಂತವಿರಲಿದೆ. ಈ ಪದ್ಧತಿಯಲ್ಲಿ ಹೆಚ್ಚಿನ ಸಂಶೋಧನೆ ನಡೆಯಬೇಕು ಎಂದು ಹೇಳಿದರು.

ವಿದ್ಯಾರ್ಥಿಗಳು ಹಾಗೂ ಪಾಲಕರು, ಅನಿಸಿಕೆಗಳನ್ನು ಹಂಚಿಕೊಂಡರು. ಸಿನೇಟ್ ಸದಸ್ಯ ಡಾ.ಜೆ.ಆರ್. ಜೋಶಿ ಪ್ರಮಾಣ ವಚನ ಬೋಧಿಸಿದರು.

ಉಪಾಧ್ಯಕ್ಷರಾದ ಡಾ. ಗೋವಿಂದ ಮಣ್ಣೂರ, ಡಾ.ಪಿ.ಕೆ.ಗಂಡಮಾಲಿ, ಕಾರ್ಯದರ್ಶಿ ಸಂಜೀವ ಜೋಶಿ, ಖಜಾಂಚಿ ಎಸ್.ಆರ್. ಮಾಮಲೇದೇಶಪಾಂಡೆ, ಸದಸ್ಯರಾದ ಡಾ. ಭಾಸ್ಕರ ಪಾಟೀಲ್, ಡಾ. ಪ್ರದೀಪ ದೇಸಾಯಿ, ಡಾ.ಎಸ್.ಎಂ. ಕರ್ನಲಕರ, ಡಾ. ವಿ.ಆರ್. ಪಾಟೀಲ್, ಪ್ರಾಚಾರ್ಯ ಡಾ.ಎ.ಎಸ್. ಪ್ರಶಾಂತ, ಡಾ. ಪೂರ್ಣಿಮಾ ಬಿ., ಡಾ. ಲಕ್ಷ್ಮೀ ಪಾಟೀಲ, ಡಾ. ಸಿ. ತ್ಯಾಗರಾಜ ಇತರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net