

ಬೈಂದೂರು: ಯುವಕರು ಸಮುದಾಯದ ಅಮೂಲ್ಯ ಆಸ್ತಿ. ಅವರನ್ನು ಸಾಮಾಜಿಕವಾಗಿ ಉಪಯುಕ್ತರಾಗುವಂತೆ ರೂಪುಗೊಳಿಸಬೇಕು. ಮಾದಕ ವ್ಯಸನಕ್ಕೆ ಬಲಿಯಾಗುವ ಯುವಜನಾಂಗಕ್ಕೆ ಅದರಿಂದಾಗುವ ದುಷ್ಪರಿಣಾಮಗಳ ಬಗ್ಗೆ ಮನವರಿಕೆ ಮಾಡಬೇಕು ಎಂದು ಬೈಂದೂರು ಪಿಎಸ್‌ಐ ತಿಮ್ಮೇಶ್ ಬಿ.ಎನ್ ಹೇಳಿದರು.
ಬೈಂದೂರು ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಎನ್‌ಎಸ್‌ಎಸ್ ಘಟಕ, ಮಾದಕ ದ್ರವ್ಯ ನಿವಾರಣಾ ಸಮಿತಿ ಹಾಗೂ ಬೈಂದೂರು ಆರಕ್ಷಕ ಠಾಣೆ ಸಹಯೋಗದಲ್ಲಿ ಕಾಲೇಜು ಸಭಾಂಗಣದಲ್ಲಿ ಮಂಗಳವಾರ ಮಾದಕ ದ್ರವ್ಯ ಮುಕ್ತ ಸಮಾಜದ ನಿರ್ಮಾಣದಲ್ಲಿ ಯುವಜನತೆಯ ಪಾತ್ರ ವಿಷಯದ ಬಗ್ಗೆ ಉಪನ್ಯಾಸ ನೀಡಿದರು.
ಪ್ರಾಂಶುಪಾಲ ನಾಗರಾಜ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು. ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಸುಹರ್ಷಿಣಿ, ರೂಪಾ, ಸಿಂಚನಾ, ಸೌಜನ್ಯ ಅವರಿಗೆ ಬಹುಮಾನ ವಿತರಿಸಲಾಯಿತು. ಐಕ್ಯುಎಸಿ ಸಂಚಾಲಕಿ ಚಿತ್ರಾ ಪಡಿಯಾರ್, ಎನ್‌ಎಸ್‌ಎಸ್ ಸಂಚಾಲಕ ನವೀನ್ ಎಚ್.ಜೆ, ಹಲವರು ಉಪಸ್ಥಿತರಿದ್ದರು.