

ಬನ್ನಿಕುಪ್ಪೆ: ಬನ್ನಿಕುಪ್ಪೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ತೆಂಕಲಕೊಪ್ಪಲು ಗ್ರಾಮದಿಂದ ಹೊರಟ ಸಂವಿಧಾನ ರಥವನ್ನು ಬನ್ನಿಕುಪ್ಪೆ ಗ್ರಾಮದ ಮಾರಿಗುಡಿ ಆವರಣದಲ್ಲಿ ಇರಿಸಲಾಯಿತು.
ಕಾರ್ಯಕ್ರಮವನ್ನು ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಸಿದ್ದರಾಜು, ಪ್ರಾಂಶುಪಾಲ ನಾಗೇಗೌಡ, ಉಪಪಾಂಶುಪಾಲೆ ಲಕ್ಷ್ಮೀಕಾಂತ್, ಸಿಆರ್‌ಪಿ ತಿಮ್ಮರಾಜು ಉದ್ಘಾಟಿಸಿದರು.
ನಂತರ ಬನ್ನಿಕುಪ್ಪೆ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಉಪನ್ಯಾಶಕ ನಾಗರಾಜು ಸಂವಿಧಾನದ ಬಗ್ಗೆ ಸಾರ್ವಜನಿಕರಿಗೆ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಿದರು. ಕಾರ್ಯಕ್ರಮದಲ್ಲಿ ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಶಣಾ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.
ಸಂವಿಧಾನದ ಬಗ್ಗೆ ಕಿರುಚಿತ್ರ ಪ್ರದರ್ಶನ ಮಾಡಲಾಯಿತು. ಶಾಲಾ-ಕಾಲೇಜು ವಿಧ್ಯಾರ್ಥಿಗಳಿಂದ ಕೋಲಾಟ, ವೀರಗಾಸೆ, ದೊಳ್ಳುಕುಣಿತ ಮತ್ತು ಸಂಸ್ಕೃತಿಕ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಗ್ರಾಮ ಪಂಚಾಯಿತಿ ಅಧ್ಯಕ್ಷ ಬಿ.ಆರ್.ಗೋವಿಂದನಾಯಕ, ಡಾ.ಪವಿತ್ರಾ, ಪಿಡಿಒ ರಾಘವೇಂದ್ರ ಪ್ರಸನ್ನ, ಕಾರ್ಯದರ್ಶಿ ಸಿ.ಎಸ್.ವೇದಮೂರ್ತಿ, ಸದಸ್ಯರಾದ ದಿನೇಶ್, ಪರಶುರಾಮ್, ಬಿ.ಎಚ್.ಲೋಕೇಶ್, ಎಂ.ಸಿ.ಚಂದ್ರಶೇಖರ, ಚಂದ್ರೇಗೌಡ, ಅರೋಗ್ಯ ಸಹಾಯಕರಾದ ನಾಗರಾಜು, ಅನಂತ್‌ರಾವ್ ಪವಾರ್, ಉಪನ್ಯಾಸಕರು, ಮುಖ್ಯಶಿಕ್ಷಕರು, ಆಶಾ, ಅಂಗನವಾಡಿ ಕಾರ್ಯಕರ್ತೆಯರು, ಸ್ವ-ಸಹಾಯ ಸಂಘದವರು, ಶಾಲಾ-ಕಾಲೇಜು ವಿದ್ಯಾರ್ಥಿಗಳು ಭಾಗವಹಿಸಿದ್ದರು.