

ಶನಿವಾರಸಂತೆ: ಇಲ್ಲಿನ ತ್ಯಾಗರಾಜ ಕಾಲನಿಯಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಾವು ಪ್ರತಿಷ್ಠಾನ ಟ್ರಸ್ಟ್ ವತಿಯಿಂದ ವಿದ್ಯಾರ್ಥಿಗಳಿಗೆ ಮಕ್ಕಳ ಹಕ್ಕು ಕುರಿತು ಮಾಹಿತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಕ್ಕಳ ಶಿಕ್ಷಣದ ಹಕ್ಕು, ಪ್ರಶ್ನೆ ಕೇಳುವ ಹಕ್ಕು ಮುಂತಾದ ವಿಚಾರಗಳ ಕುರಿತು ನಾವು ಪ್ರತಿಷ್ಠಾನ ಸಂಸ್ಥೆಯ ಕಾರ್ಯಕರ್ತೆ ಬಿ.ಕೆ.ಕುಮಾರಿ ಮಾಹಿತಿ ನೀಡಿದರು. ಇದಲ್ಲದೆ ಪೋಕ್ಸೋ ಕಾಯ್ದೆ ಕುರಿತು ಮಾಹಿತಿ ನೀಡುವುದರ ಜತೆಗೆ ಮೊಬೈಲ್‌ನಲ್ಲಿ ಪೋಕ್ಸೋ ಕುರಿತಾದ ಸಿನಿಮಾವನ್ನು ತೋರಿಸುವ ಮೂಲಕ ವಿದ್ಯಾರ್ಥಿಗಳಿಗೆ ಅರಿವು ಮೂಡಿಸಲಾಯಿತು.
ಶಾಲೆ ಮುಖ್ಯ ಶಿಕ್ಷಕ ಪುಟ್ಟಸ್ವಾಮಿ, ಸಹ ಶಿಕ್ಷಕಿ ಸುನಂದಾ, ಧನು ಮುಂತಾದವರಿದ್ದರು.