

ಭಟ್ಕಳ: ಸರ್ಕಾರಿ ಶಾಲೆಗಳು ಗುಣಮಟ್ಟದ ಶಿಕ್ಷಣದ ಜತೆಗೆ ಸಂಸ್ಕಾರವನ್ನು ಕಲಿಸುತ್ತವೆ. ಖಾಸಗಿ ಶಾಲೆಗಳು ಉದ್ಯೋಗಕ್ಕಾಗಿ ಶಿಕ್ಷಣ ನೀಡಿದರೆ, ಸರ್ಕಾರಿ ಶಾಲೆಯಲ್ಲಿ ಕಲಿತವರು ಮಾನವೀಯ ಮೌಲ್ಯಗಳನ್ನು ಅರಿತಿರುತ್ತಾರೆ ಎಂದು ಬಿಆರ್ಸಿ ಸಮನ್ವಯಾಧಿಕಾರಿ ಪೂರ್ಣಿಮಾ ಮೊಗೇರ ಹೇಳಿದರು.
ಪಟ್ಟಣದ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮದಲ್ಲಿ ದಾನಿ ವಿಠ್ಠಲ್ ರಾಮಚಂದ್ರ ಕಾಮತ ಅವರನ್ನು ಸನ್ಮಾನಿಸಿ ಮಾತನಾಡಿದರು.
ಇಲ್ಲಿನ ಸರ್ಕಾರಿ ಶಾಲೆಯಲ್ಲಿ ಅಂಗ್ಲ ಮಾಧ್ಯಮವೂ ಆರಂಭವಾಗಿದ್ದು, 83 ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ದಾನಿ ವಿಠ್ಠಲ್ ಕಾಮತ ಅವರಂತೆ ಇತರ ವಿದ್ಯಾರ್ಥಿಗಳ ಪಾಲಕರು ಸರ್ಕಾರಿ ಶಾಲೆಗೆ ದಾನ ನೀಡಲು ಮುಂದೆ ಬಂದರೆ ಸರ್ಕಾರಿ ಶಾಲೆಯನ್ನು ಮತ್ತಷ್ಟು ಉನ್ನತ ಮಟ್ಟಕ್ಕೆ ಕೊಂಡೊಯ್ಯಲು ಸಹಕಾರಿಯಾಗಲಿದೆ ಎಂದರು.
ಮುಖ್ಯಾಧ್ಯಾಪಕಿ ಪಿ.ಎ. ಗೋಮ್್ಸ ಮಾತನಾಡಿದರು. ಅಂದಾಜು 40 ಸಾವಿರಕ್ಕೂ ಅಧಿಕ ಮೌಲ್ಯದ 83 ಟ್ರ್ಯಾಕ್ಸೂಟ್ಗಳನ್ನು ವಿಠ್ಠಲ್ ಅವರು ದೇಣಿಗೆಯಾಗಿ ನೀಡಿದರು. ವಿಠ್ಠಲ್ ಕಾಮತ ಅವರನ್ನು ಶಾಲೆಯ ಪರವಾಗಿ ಹಾಗೂ ಆಡಳಿತ ಮಂಡಳಿಯ ಪರವಾಗಿ ಸನ್ಮಾನಿಸಲಾಯಿತು.
ಎಸ್ಡಿಎಂಸಿ ಅಧ್ಯಕ್ಷ ದೇವಿದಾಸ ನಾಯ್ಕ, ಉಪಾಧ್ಯಕ್ಷೆ ಮಮತಾ ದೇವಾಡಿಗ, ಸದಸ್ಯರಾದ ವಿಶ್ವನಾಥ ಕಾಮತ, ರಾಮಕೃಷ್ಣ ಭಟ್, ಉದಯ ನಾಯ್ಕ, ನಾಗರಾಜ ದೇವಾಡಿಗ, ಜಯಾ ಭಟ್, ಶುಭಾ ಮೊಗೇರ, ಭಾಸ್ಕರ ದೇವಾಡಿಗ ಇತರರು ಇದ್ದರು. ಶಿಕ್ಷಕಿ ಪ್ರತಿಮಾ ಎಂ. ನಿರೂಪಿಸಿದರು. ಶಿಕ್ಷಕಿ ಮಹಾಲಕ್ಷ್ಮೀ ಪಟಗಾರ ವಂದಿಸಿದರು.