ರೈತರ ಸಮಸ್ಯೆಗಳ ಅರಿವು ಅಗತ್ಯ

25 feb tnp 02
ತಿ.ನರಸೀಪುರ ರೇಷ್ಮೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ನಿವೃತ್ತ ಸಹಾಯಕ ನಿರ್ದೇಶಕ ಎಂ.ಕೃಷ್ಣ ಮೂರ್ತಿ ಅವರನ್ನು ಸನ್ಮಾನಿಸಲಾಯಿತು. ಎಂ.ವಿ.ಶಿವಶಂಕರಮೂರ್ತಿ, ರಾಚಪ್ಪ, ಮಂಜುಳಾ, ಎಸ್. ಪ್ರಭಾಕರ್ ಮೂರ್ತಿ, ನೇತ್ರಾವತಿ, ಶಿವರಾಜು, ಶಶಾಂಕ್, ಎಂ.ಶಿವಕುಮಾರ್ ಇದ್ದರು.
Published on

ತಿ.ನರಸೀಪುರ: ಕೃಷಿ ಚಟುವಟಿಕೆಗಳಲ್ಲಿ ರೈತರ ಆರ್ಥಿಕ ಸಮಸ್ಯೆಗಳನ್ನು ಅರಿತು ಸ್ಪಂದಿಸಿದಾಗ ಮಾತ್ರವೇ ರೇಷ್ಮೆ ಇಲಾಖೆಯಲ್ಲಿ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯನಿರ್ವಹಿಸಲು ಸಾಧ್ಯ ಎಂದು ನಿರ್ಗಮಿತ ರೇಷ್ಮೆ ಸಹಾಯಕ ನಿರ್ದೇಶಕ ಎಂ. ಕೃಷ್ಣಮೂರ್ತಿ ಹೇಳಿದರು.

ಪಟ್ಟಣದ ರೇಷ್ಮೆ ಇಲಾಖೆ ಸಹಾಯಕ ನಿರ್ದೇಶಕರ ಕಚೇರಿಯಲ್ಲಿ ಮಂಗಳವಾರ ನಿವೃತ್ತಿ ಹಿನ್ನೆಲೆಯಲ್ಲಿ ಹಮ್ಮಿಕೊಂಡಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಅಧಿಕಾರಿಗಳು ಹಾಗೂ ಸಿಬ್ಬಂದಿ ವರ್ಗದವರಿಂದ ಬೀಳ್ಕೊಡುಗೆ ಸನ್ಮಾನ ಸ್ವೀಕರಿಸಿ ಮಾತನಾಡಿದರು.

ಚಿನ್ನದಂತಹ ರೇಷ್ಮೆ ಬೆಳೆ ನಿರಂತರವಾಗಿ ರೈತರ ಕೈ ಹಿಡಿಯಲು ನಮ್ಮ ಸಹಕಾರವೂ ಪ್ರಮುಖವಾಗಿದೆ. ರೈತರಿಗೆ ಸ್ಪಂದಿಸಿ, ನೆರವಾಗಿದ್ದೇವೆ ಎಂಬುದಕ್ಕೆ ನಿವೃತ್ತಿಯ ನಂತರ ಅವರು ನಮಗೆ ನೀಡುವ ಗೌರವವೇ ಸಾಕ್ಷಿ ಎಂದರು.

ರೈತರು ಬೆವರಿನ ಶ್ರಮ ಸರ್ಕಾರಿ ಅಧಿಕಾರಿ ಅಥವಾ ಸಿಬ್ಬಂದಿಯಾಗಿ ಕಾರ್ಯನಿರ್ವಹಿಸುವ ನಮಗೆ ಅರಿವಿರಬೇಕು. ರೈತರಿಗೆ ಅತಿ ಹೆಚ್ಚು ಸಂಪರ್ಕ ಇರುವ ಇಲಾಖೆಯಿಂದ ದೊರೆಯುವ ಎಲ್ಲ ಸವಲತ್ತನ್ನು ನೇರವಾಗಿ ದೊರಕಿಸಿ ಕೊಡುವ ನಿಟ್ಟಿನಲ್ಲಿ ಕಾರ್ಯನಿರ್ವಹಿಸುವಂತಾಗಬೇಕು ಎಂದು ಸಲಹೆ ನೀಡಿದರು.

ಸರ್ಕಾರಿ ನೌಕರ ಸಂಘದ ತಾಲೂಕು ಅಧ್ಯಕ್ಷ ಎಂ.ವಿ.ಶಿವಶಂಕರಮೂರ್ತಿ ಸೇರಿದಂತೆ ರೇಷ್ಮೆ ಉಪ ನಿರ್ದೇಶಕ ರಾಚಪ್ಪ, ಕೆಎಸ್‌ಐಸಿ ವ್ಯವಸ್ಥಾಪಕಿ ಮಂಜುಳಾ ಮಾತನಾಡಿದರು. ರೇಷ್ಮೆ ನಿರೀಕ್ಷಕ ಎಸ್. ಪ್ರಭಾಕರ್ ಮೂರ್ತಿ, ನೇತ್ರಾವತಿ, ಶಿವರಾಜು, ಶಶಾಂಕ್, ಎಂ.ಶಿವಕುಮಾರ್, ರೇಷ್ಮೆ ವಿಸ್ತರಣಾಧಿಕಾರಿ ಕೆ.ಪಿ.ರಾಜು, ರೇಷ್ಮೆ ಇಲಾಖೆಯ ಅಧಿಕಾರಿಗಳು ಹಾಗೂ ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net