ಸೈಬರ್ ಮೋಸಗಳಿಗೆ ಎಚ್ಚರಿಕೆಯೇ ಮದ್ದು

Cyber Fraud
Published on

ಬೆಳ್ತಂಗಡಿ: ಜನರ ಭಾವನೆಯನ್ನೇ ಬಂಡವಾಳವಾಗಿಸಿ, ತಂತ್ರಜ್ಞಾನಗಳನ್ನು ಬಳಸಿ ಮಾಡುತ್ತಿರುವ ಸೈಬರ್ ಅಪರಾಧಗಳು ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ವಿದ್ಯಾವಂತರೇ ಈ ವಂಚನೆ ಜಾಲಗಳಲ್ಲಿ ಮತ್ತೆ ಮತ್ತೆ ಸಿಲುಕುತ್ತಿರುವುದು ಆಶ್ಚರ್ಯಕರ ಎಂದು ಸೈಬರ್ ಝೆನ್ ವಿಭಾಗದ ಡಿವೈ.ಎಸ್.ಪಿ.ಮಂಜುನಾಥ ಆರ್.ಜಿ.ಹೇಳಿದರು.

ಉಜಿರೆ ಎಸ್‌ಡಿಎಂ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಬೆಳ್ತಂಗಡಿ ರೋಟರಿ ಹಾಗೂ ಮಂಗಳೂರಿನ ಸೈಬರ್‌ಕ್ರೈಂ ಅಪರಾಧ ತಡೆ ದಳ ಜಂಟಿಯಾಗಿ ಬಿವೋಕ್ ಡಿಜಿಟಲ್ ಮೀಡಿಯಾ ಮತ್ತು ಫಿಲಂ ಮೇಕಿಂಗ್, ರಿಟೈಲ್ ಆಂಡ್ ಸಪ್ಲೈಚೈನ್ ವಿಭಾಗದ ಸಹಯೋಗದಲ್ಲಿ ಬಿವೋಕ್ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸೈಬರ್ ಅಪರಾಧಗಳ ಪ್ರಶಿಕ್ಷಣ ಕಾರ್ಯಾಗಾರದಲ್ಲಿ ಮಾತನಾಡಿದರು.

ಹೆಚ್ಚಿನ ಅಪರಾಧಗಳಲ್ಲಿ ಆರೋಪಿಯ ಪತ್ತೆ ಬಹಳ ಕಷ್ಟದ ಜತೆಗೆ ಕಳೆದುಕೊಂಡದ್ದನ್ನು ಹಿಂತಿರುಗಿಸವುದು ಕಷ್ಟ. ಆ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇದನ್ನು ಬಳಕೆ ಮಾಡುವುದೊಂದೆ ಇದಕ್ಕಿರುವ ಸೂಕ್ತ ಪರಿಹಾರ ಎಂದರು.

ಬೆಳ್ತಂಗಡಿ ರೋಟರಿ ಅಧ್ಯಕ್ಷ ಪೂರಣ್ ವರ್ಮ ಮಾತನಾಡಿದರು. ಪ್ರಾಂಶುಪಾಲ ಡಾ.ಬಿ.ಎ.ಕುಮಾರ ಹೆಗ್ಡೆ ಅಧ್ಯಕ್ಷತೆ ವಹಿಸಿದ್ದರು. ಸ್ನಾತಕೋತ್ತರ ಕೇಂದ್ರದ ಡೀನ್ ಡಾ.ಪಿ.ವಿಶ್ವನಾಥ್, ಬಿವೋಕ್ ವಿಭಾಗ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಬಿವೋಕ್ ವಿಭಾಗದ ಪ್ರಾಧ್ಯಾಪಕಿ ಅಶ್ವಿನಿ ಜೈನ್ ನಿರೂಪಿಸಿ. ಪ್ರಾಧ್ಯಾಪಕ ಪ್ರವೀಣ ಡಿ.ಕಾರ್ಯಕ್ರಮ ಸಂಯೋಜಿಸಿದರು.

ಜನರಿಗೆ ಹೆಚ್ಚು ಮನವರಿಕೆ ಮಾಡಬೇಕು

ಸೈಬರ್ ಲೋಕದ ಈ ಮೋಸ ಜನರಿಗೆ ಹೆಚ್ಚು ಮನವರಿಕೆ ಮಾಡಿಕೊಡುವ ಮೂಲಕ ಸರಿಯಾದ ಜ್ಞಾನವನ್ನು ಕೊಡುವುದು ಈ ಸರಣಿ ಕಾರ್ಯಕ್ರಮ ಉದ್ದೇಶ. ಮುಂದೆ ದ.ಕ.ಎಲ್ಲ ಭಾಗಗಳನ್ನು ಇದನ್ನು ಮಾಡಲು ರೂಪುರೇಷೆ ಮಾಡಿಕೊಂಡಿದ್ದೇವೆ, ವಿದ್ಯಾರ್ಥಿಗಳು ಊರುಗಳಲ್ಲಿ ಇತರರಿಗೆ ಈ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net