ಕಿಬ್ಬೆಟ್ಟ ಗಿರಿಜನರ ಮಹಿಳೆಯರಿಗೆ ಸ್ವಚ್ಛತೆ ಅರಿವು

11spt1
Published on

ಸೋಮವಾರಪೇಟೆ: ಗೌಡಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರ, ಸೋಮವಾರಪೇಟೆ ಕಾಫಿ ಮಂಡಳಿ ವತಿಯಿಂದ ಕಿಬ್ಬೆಟ್ಟ ಗಿರಿಜನರ ಹಾಡಿಯಲ್ಲಿ ಇತ್ತೀಚೆಗೆ ಸ್ವಚ್ಛತಾ ಪಾಕ್ಷಿಕ ಕಾರ್ಯಕ್ರಮ ನಡೆಯಿತು.

ಹಿರಿಯ ಆರೋಗ್ಯ ಸುರಕ್ಷ ಅಧಿಕಾರಿ ಕೆ.ಪಿ.ಪಾರ್ವತಿ ಅವರು ಮಹಿಳೆಯರಿಗೆ ವೈಯುಕ್ತಿಕ ಸ್ವಚ್ಛತೆ ಬಗ್ಗೆ ತಿಳಿ ಹೇಳಿದರು. ಪರಿಸರವನ್ನು ಸ್ವಚ್ಛವಾಗಿ ಇಟ್ಟುಕೊಂಡರೆ ಸಾಂಕ್ರಾಮಿಕ ರೋಗಗಳು ಬರುವುದಿಲ್ಲ. ಚರಂಡಿಯಲ್ಲಿ ಕೊಳಚೆ ನೀರು ಸಂಗ್ರಹವಾಗದಂತೆ ಎಚ್ಚರ ವಹಿಸಬೇಕು. ಕುದಿಸಿ ಆರಿಸಿದ ನೀರನ್ನು ಉಪಯೋಗಿಸಬೇಕೆಂದು ಸಲಹೆ ನೀಡಿದರು. ಇದೇ ಸಂದರ್ಭದಲ್ಲಿ ಗಿರಿಜನ ಮಹಿಳೆಯರಿಗೆ ಸೋಪು, ಪೇಸ್ಟ್, ಟವಲ್ ಸೇರಿದಂತೆ ಇತರ ವಸ್ತುಗಳ ಕಿಟ್ಟ ವಿತರಿಸಲಾಯಿತು.

ಕಾಫಿ ಮಂಡಳಿ ಹಿರಿಯ ಸಂಪರ್ಕಾಧಿಕಾರಿ ರಂಜಿತ್ ಕುಮಾರ್, ಜಿಎಲ್‌ಒ ಕೃಷ್ಣಕುಮಾರ್, ವಿಸ್ತರಣಾಧಿಕಾರಿಗಳಾದ ಡಾ.ಪ್ರಜ್ವಲ್‌ಗೌಡ, ಡಾ.ಪಲ್ಲವಿ ಮತ್ತು ಆಶಾ ಕಾರ್ಯಕರ್ತೆಯರು ಭಾಗವಹಿಸಿದ್ದರು.

ಚಿತ್ರ:11ಎಸ್‌ಪಿಟಿ1-ಸೋಮವಾರಪೇಟೆ ಸಮೀಪದ ಕಿಬ್ಬೆಟ್ಟ ಗಿರಿಜನರ ಹಾಡಿಯಲ್ಲಿ ಸ್ವಚ್ಛತಾ ಕಾರ್ಯಕ್ರಮದ ಅಂಗವಾಗಿ ಗಿರಿಜನರ ಮಹಿಳೆಯರಿಗೆ ಕಿಟ್ ವಿತರಿಸಲಾಯಿತು. ರಂಜಿತ್ ಕುಮಾರ್, ಪಾರ್ವತಿ, ಕೃಷ್ಣಕುಮಾರ್, ಪ್ರಜ್ವಲ್‌ಗೌಡ, ಪಲ್ಲವಿ ಇದ್ದರು

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net