ರಕ್ತದಾನದ ಜಾಗೃತಿ ಅಗತ್ಯ

h29-blood donation
Published on

ಹುಬ್ಬಳ್ಳಿ: ರಾಷ್ಟ್ರೋತ್ಥಾನ ರಕ್ತ ಕೇಂದ್ರ ಹಾಗೂ 1996ನೇ ಬ್ಯಾಚ್‌ನ ಹಳೆಯ ವಿದ್ಯಾರ್ಥಿಗಳ ಸಹಯೋಗದಲ್ಲಿ ಇಲ್ಲಿಯ ವಿದ್ಯಾನಗರದ ಕೆಎಲ್‌ಇ ಎಂ.ಆರ್.ಸಾಖರೆ ಆಂಗ್ಲ ಮಾಧ್ಯಮ ಶಾಲೆಯಲ್ಲಿ (ಸ್ಟೇಟ್) ಸೋಮವಾರ ರಕ್ತದಾನ ಶಿಬಿರ ಏರ್ಪಡಿಸಲಾಗಿತ್ತು.
ಪ್ರಾಚಾರ್ಯೆ ಶೀತಲ್ ತಿವಾರಿ ಮಾತನಾಡಿ, ಮಹಿಳೆಯರು ಹಿಮೋಗ್ಲೋಬಿನ್ ಕೊರತೆಯಿಂದ ಬಳಲುತ್ತಿದ್ದಾರೆ. ಅಂಥವರು ತಿನ್ನುವ ಆಹಾರ ಪದಾರ್ಥಗಳನ್ನು ಅರಿತುಕೊಳ್ಳುವುದಲ್ಲದೇ ವೈದ್ಯರ ಸಲಹೆ ಪಡೆಯಬೇಕು. ರಕ್ತದಾನ ಮಹತ್ವ ಕುರಿತು ಎಲ್ಲೆಡೆ ಜಾಗೃತಿ ಮೂಡಿಸಬೇಕು ಎಂದರು.
ಹಳೆಯ ವಿದ್ಯಾರ್ಥಿ ಸಂಘದ ವಿನೋದಕುಮಾರ ಪಟ್ವಾ ಮಾತನಾಡಿ, ಅರ್ಥಪೂರ್ಣ ಕಾರ್ಯಕ್ರಮ ಆಯೋಜಿಸಲು ಚಿಂತಿಸಿದ್ದೆವು. ಅದೀಗ ಸಾಕಾರಗೊಂಡಿದೆ ಎಂದರು.
ಎಲುಬು ಮತ್ತು ಕೀಲು ತಜ್ಞ ಡಾ. ಸಂದೀಪ ನೀರಲಗಿ, ಹಳೆಯ ವಿದ್ಯಾರ್ಥಿಗಳಾದ ಡಾ. ವಿನಯ ಗಡಗಿ, ಡಾ. ಗೀತಾ ಹಿರೇಮಠ, ಸುಭಾಷ ಹಂಗರಕಿ, ಮಿಥುನ ಪಾಟೀಲ, ಗಾಯತ್ರಿ ಸೇರಿದಂತೆ ಒಟ್ಟು 39 ಜನರು ರಕ್ತದಾನ ಮಾಡಿದರು.
ಪ್ರಮುಖರಾದ ಡಾ.ಎಸ್.ಎಸ್. ಸಾಂಗೋಳಿ, ದತ್ತಮೂರ್ತಿ ಕುಲಕರ್ಣಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net