ಪ್ರಾಣಿ ಬಲಿ ಕಾನೂನಿಗೆ ವಿರುದ್ಧ ಆಚರಣೆ: ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಎಚ್ಚರಿಕೆ

Awareness meeting in Satanur village Mandya
Published on

ಮಂಡ್ಯ: ದೇವರ ಹೆಸರಿನಲ್ಲಿ ಪ್ರಾಣಿಗಳನ್ನು ಬಲಿ ಕೊಡುವುದು ಕಾನೂನಿಗೆ ವಿರುದ್ಧವಾದ ಆಚರಣೆ ಎಂದು ತಹಸೀಲ್ದಾರ್ ಡಾ.ಶಿವಕುಮಾರ್ ಬಿರಾದರ್ ಹೇಳಿದರು.

ತಾಲೂಕಿನ ಸಾತನೂರು ಗ್ರಾಮದಲ್ಲಿ ಮಸಣಮ್ಮ ದೇವಿ ಜಾತ್ರಾ ಮಹೋತ್ಸವ ಹಿನ್ನೆಲೆಯಲ್ಲಿ ತಾಲೂಕು ಆಡಳಿತ, ಪೊಲೀಸ್ ಇಲಾಖೆ, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಸಹಯೋಗದಲ್ಲಿ ಆಯೋಜಿಸಿದ್ದ ಜಾಗೃತಿ ಸಭೆಯಲ್ಲಿ ಮಾತನಾಡಿದ ಅವರು, ಕರ್ನಾಟಕ ಪ್ರಾಣಿ ಬಲಿ ನಿಷೇದ ಕಾಯ್ದೆ 1959 ಮತ್ತು ನಿಯಮಗಳು 1963 ರನ್ವಯ ದೇವಸ್ಥಾನಗಳಲ್ಲಿ ಪ್ರಾಣಿಗಳನ್ನು ಬಲಿ ಕೊಡಬಾರದು. ಆದ್ದರಿಂದ ಸಾರ್ವಜನಿಕರು ಪ್ರಾಣಿ ಬಲಿ ಕೊಡುವ ಪದ್ಧತಿ ನಿಲ್ಲಿಸಿ ಸಾತ್ವಿಕವಾಗಿ ದೇವರನ್ನು ಪೂಜಿಸಿ ಹಬ್ಬ ಆಚರಿಸುವಂತೆ ಸಲಹೆ ನೀಡಿದರು.

ಮಂಡ್ಯ ಗ್ರಾಮಾಂತರ ಪೊಲೀಸ್ ಠಾಣೆಯ ಇನ್ಸ್‌ಪೆಕ್ಟರ್ ಕೆ.ಬಿ.ಶಿವಪ್ರಸಾದ್‌ರಾವ್, ಪಿಡಿಒ ಮಲ್ಲೇಶ, ರಾಜಸ್ವ ನಿರೀಕ್ಷಕ ಮನೋಹರ್, ವಿಶ್ವ ಪ್ರಾಣಿ ಕಲ್ಯಾಣ ಮಂಡಳಿ ಅಧ್ಯಕ್ಷ ದಯಾನಂದ ಸ್ವಾಮಿಜಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net