ಮತದಾರರ ನೋಂದಣಿ ಜಾಗೃತಿ ಜಾಥಾ

kottor
ಕೊಟ್ಟೂರಿನಲ್ಲಿ ಗುರುವಾರ ಏರ್ಪಡಿಸಿದ್ದ ಪದವೀಧರ ಮತದಾರರ ಹೆಸರು ನೋಂದಣಿ ಜಾಥಾದಲ್ಲಿ ತಾಪಂ ಇಒ ವೈ.ರವಿಕುಮಾರ್, ಪಪಂ ಮುಖ್ಯ ಅಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆ ಸಿಇಒ ನಿಂಗಪ್ಪ, ಸ್ವೀಪ್ ಅಧಿಕಾರಿ ಶಶಿಧರ ಮೈದೂರು, ಅಜ್ಜಪ್ಪ. ಡಿ. ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.
Published on

ಕೊಟ್ಟೂರು: ಪಟ್ಟಣದಲ್ಲಿ ಪದವೀಧರ ಮತದಾರರ ನೋಂದಣಿ ಜಾಗೃತಿ ಜಾಥಾವನ್ನು ಗುರುವಾರ ಪಟ್ಟಣ ಪಂಚಾಯಿತಿ, ತಾಲೂಕು ಪಂಚಾಯಿತಿ, ತಹಶೀಲ್ದಾರ್ ಕಚೇರಿ ಜಂಟಿಯಾಗಿ ಹಮ್ಮಿಕೊಂಡಿದ್ದವು.

ನವೆಂಬರ್ 6 ಕೊನೆಯ ದಿನ

ಅರ್ಹ ಪದವೀಧರರು ಹೆಸರುಗಳನ್ನು ಮತದಾರರ ಪಟ್ಟಿಯಲ್ಲಿ ಸೇರ್ಪಡೆ ಮಾಡಲು ನವೆಂಬರ್ 6 ಕೊನೆಯ ದಿನವಾಗಿರುತ್ತದೆ. ನಮೂನೆ 18ರಲ್ಲಿ ಮಾಹಿತಿಯನ್ನು ಭರ್ತಿ ಮಾಡಿ ಪದವಿ ಪ್ರಮಾಣ ಪತ್ರ, ಆಧಾರ್ ಕಾರ್ಡ್, ಚುನಾವಣೆಯ ಗುರುತಿನ ಕಾರ್ಡ್ ದೃಢೀಕರಿಸಿ ಲಗತ್ತಿಸಬೇಕು ಎಂದು ಜಾಥಾದಲ್ಲಿ ಜಾಗೃತಿ ಮೂಡಿಸಲಾಯಿತು.

ತಾಪಂ ಇಒ ವೈ. ರವಿಕುಮಾರ್, ಪಪಂ ಮುಖ್ಯ ಅಧಿಕಾರಿ ನಸರುಲ್ಲಾ, ಶಿಕ್ಷಣ ಇಲಾಖೆ ಸಿಇಒ ನಿಂಗಪ್ಪ, ಸ್ವೀಪ್ ಅಧಿಕಾರಿ ಶಶಿಧರ ಮೈದೂರು, ಅಜ್ಜಪ್ಪ. ಡಿ. ಶಿವಕುಮಾರ್ ಹಾಗೂ ವಿದ್ಯಾರ್ಥಿಗಳು ಭಾಗವಹಿಸಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net