ರೇಬಿಸ್ ಕಾಯಿಲೆ ತಡೆಯಲು ಜಾಗೃತಿ ಅಗತ್ಯ

28 CRP-1A.
Published on

ಚನ್ನರಾಯಪಟ್ಟಣ : ರೇಬಿಸ್ ವೈರಾಣುವಿನಿಂದ ಹರಡುವ ಮಾರಕ ಕಾಯಿಲೆಯಾಗಿದ್ದು, ಇದರ ತಡೆಗಟ್ಟುವಿಕೆ ಬಗ್ಗೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವುದು ಅವಶ್ಯಕವಾಗಿದೆ ಎಂದು ಪಶು ಆಸ್ಪತ್ರೆಯ ಪಶು ವೈದ್ಯಾಧಿಕಾರಿ ಡಾ.ಕೆ.ಎಲ್.ಯಶವಂತ್ ಸಲಹೆ ನೀಡಿದರು.


ವಿಶ್ವ ರೇಬಿಸ್ ದಿನಾಚರಣೆಯ ಅಂಗವಾಗಿ ಪಟ್ಟಣದ ಪಶು ಆಸ್ಪತ್ರೆಯ ಆವರಣದಲ್ಲಿ ಶನಿವಾರ ಆಯೋಜಿಸಿದ್ದ ಸಾಕು ಪ್ರಾಣಿಗಳಿಗೆ ಉಚಿತ ರೇಬಿಸ್ ಲಸಿಕೆ ನೀಡುವ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಜಗತ್ತಿನಾದ್ಯಂತ ಪ್ರತಿವರ್ಷ ಸುಮಾರು 59 ಸಾವಿರ ಜನರು ರೇಬಿಸ್‌ನಿಂದ ಮೃತಪಡುತ್ತಿದ್ದಾರೆ. ಭಾರತದಲ್ಲಿ ಈ ಸಂಖ್ಯೆ 18 ಸಾವಿರದಿಂದ 20 ಸಾವಿರ ಇದೆ. ಅಂದರೆ, ಭಾರತವೊಂದರಿಂದಲೇ ಶೇ 36ರಷ್ಟು ಜನರು ರೇಬಿಸ್‌ನಿಂದ ಸಾಯುತ್ತಿದ್ದಾರೆ. ವಿಶ್ವದಾದ್ಯಂತ ರೇಬಿಸ್ ಕುರಿತು ಜಾಗೃತಿ ಮೂಡಿಸುವುದೇ ಈ ದಿನಾಚರಣೆಯ ಮೂಲ ಆಶಯ ಎಂದರು.


ಪುರಸಭಾ ಅಧ್ಯಕ್ಷ ಕೆ.ಎನ್.ಬನಶಂಕರಿ ರಘು, ಉಪಾಧ್ಯಕ್ಷೆ ರಾಣಿಕೃಷ್ಣ, ವಿಸ್ತರಣಾಧಿಕಾರಿ ಆನಂದ್ ಕುಮಾರ್, ಪಶು ವೈದ್ಯರುಗಳಾದ ಡಾ.ನಾಗರಾಜ್ ಗೌಡ, ಡಾ.ಮಧುಸೂದನ್, ಡಾ.ರಘುನಾಥ್, ಡಾ.ರವೀಂದ್ರ ಗಂಗಟ್ಕರ್, ಡಾ.ಪ್ರವೀಣ ಕುಮಾರ್, ಡಾ.ಕವನಾ, ಡಾ.ಚಂದನ್ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net