ಏಡ್ಸ್ ತಡೆಗೆ ಜಾಗೃತಿ ಅತ್ಯಗತ್ಯ

gld 24 aids
ಗುಳೇದಗುಡ್ಡದಲ್ಲಿ ಏಡ್ಸ್ ಜಾಗೃತಿ ನಾಟಕ ಪ್ರದರ್ಶನಕ್ಕೆ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯವೈದ್ಯಾಧಿಕಾರಿ ಡಾ. ನಾಗರಾಜ ಕುರಿ ಚಾಲನೆ ನೀಡಿದರು. ಮುಖ್ಯವೈದ್ಯಾಧಿಕಾರಿ ಡಾ. ನಾಗರಾಜ ಕುರಿ, ಪ್ರಾಚಾರ್ಯ ಪಕೀರಪ್ಪ ಚನ್ನಪ್ಪಗೌಡರ, ಐಸಿಟಿಸಿ ಸಮಾಲೋಚಕಿ ಜ್ಯೋತಿ ಮೆಣಸಿನಕಾಯಿ, ಡಾ. ಅನಿಲಕುಮಾರ ಉಕ್ಕಲಿ ಇತರರಿದ್ದರು.
Published on

ಗುಳೇದಗುಡ್ಡ: ಕಲಾಪ್ರದರ್ಶನ, ನಾಟಕ, ಸಾಂಸ್ಕೃತಿಕ ಚಟುವಟಿಕೆ ಮೂಲಕ ಮಹಾಮಾರಿ ಏಡ್ಸ್ ಕುರಿತು ಯುವಕರು ಹಾಗೂ ಜನರಲ್ಲಿ ಜಾಗೃತಿ ಮೂಡಿಸಲಾಗುತ್ತಿದೆ ಎಂದು ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಮುಖ್ಯ ವೈದ್ಯಾಧಿಕಾರಿ ಡಾ. ನಾಗರಾಜ ಕುರಿ ಹೇಳಿದರು.

ಸ್ಥಳೀಯ ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಕರ್ನಾಟಕ ರಾಜ್ಯ ಏಡ್ಸ್ ಪ್ರಿವೆನ್ಶನ್ ಸೊಸೈಟಿ, ಜಿಪಂ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಏಡ್ಸ್ ಪ್ರತಿಬಂಧಕ ಹಾಗೂ ನಿಯಂತ್ರಣ ಘಟಕ, ಐಸಿಟಿಸಿ ವಿಭಾಗ ಹಾಗೂ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಮುಧೋಳದ ಚೈತನ್ಯ ಮಹಿಳಾ ಸಂಘದಿಂದ ಎಚ್‌ಐವಿ ತಡೆಗಟ್ಟಲು ಪ್ರಚಾರಾಂದೋಲನದ ಅಂಗವಾಗಿ ಗುರುವಾರ ಹಮ್ಮಿಕೊಂಡಿದ್ದ ಬೀದಿ ನಾಟಕ ಪ್ರದರ್ಶನ ಉದ್ಘಾಟಿಸಿ ಅವರು ಮಾತನಾಡಿದರು.

ಅಸುರಕ್ಷಿತ ಲೈಂಗಿಕತೆ, ಇಂಜೆಕ್ಷನ್, ರಕ್ತದ ಮೂಲಕ ಎಚ್‌ಐವಿ ಕಾಯಿಲೆ ಹರಡುವ ಸಾಧ್ಯತೆ ಇದೆ. ಸರ್ಕಾರಿ ಆಸ್ಪತ್ರೆಗಳಲ್ಲಿ ರೋಗಕ್ಕೆ ಔಷಧ ಲಭ್ಯವಿದ್ದು, ಏಡ್ಸ್ ರೋಗಿಗಳು ಔಷಧ ಸೇವಿಸಿ ಜನಸಾಮಾನ್ಯರಂತೆ ಬದುಕು ಸಾಗಿಸಬಹುದಾಗಿದೆ ಎಂದು ತಿಳಿಸಿದರು.

ಪಟ್ಟಣದ ಪುರಸಭೆ ಎದರು, ಸಮುದಾಯ ಆರೋಗ್ಯ ಕೇಂದ್ರ, ಬಸ್ ನಿಲ್ದಾಣ, ಹಾದಿಬಸವೇಶ್ವರ ದೇವಸ್ಥಾನ ಹಾಗೂ ಬನ್ನಿಕಟ್ಟೆಯಲ್ಲಿ ಸ್ಥಳೀಯ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿಗಳು ಏಡ್ಸ್ ಜಾಗೃತಿ ನಾಟಕ ಪ್ರದರ್ಶಿಸಿದರು.

ಪ್ರಾಚಾರ್ಯ ಪಕೀರಪ್ಪ ಚನ್ನಪ್ಪಗೌಡರ, ಐಸಿಟಿಸಿ ಸಮಾಲೋಚಕಿ ಜ್ಯೋತಿ ಮೆಣಸಿನಕಾಯಿ, ಡಾ. ಅನಿಲಕುಮಾರ ಉಕ್ಕಲಿ, ಡಾ. ಬಸವರಾಜ ತಾಂಡೂರ, ಮುತ್ತಪ್ಪ ರೊಟ್ಟಿ, ಕುಮಾರ ರಾಠೋಡ ಹಾಗೂ ಆಸ್ಪತ್ರೆ ಸಿಬ್ಬಂದಿ, ಕಾಲೇಜು ಸಿಬ್ಬಂದಿ, ವಿದ್ಯಾರ್ಥಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net