

ಹುಬ್ಬಳ್ಳಿ : ಲವ್ ಜಿಹಾದ್ ವಿರುದ್ಧ ವಿದ್ಯಾರ್ಥಿ, ವಿದ್ಯಾರ್ಥಿನಿಯರು ಹಾಗೂ ಗೃಹಿಣಿಯರಲ್ಲಿ ಜಾಗೃತಿ ಮೂಡಿಸುತ್ತಿರುವ ಶ್ರೀರಾಮ ಸೇನಾ ಕಾರ್ಯಕರ್ತರು, ಗುರುವಾರದಂದು ಇಲ್ಲಿನ ಮೂರು ಕಾಲೇಜುಗಳಿಗೆ ಭೇಟಿ ನೀಡಿ, ಕರಪತ್ರ ಹಂಚಿ ಜಾಗೃತಿ ಮೂಡಿಸಿದರು.
ಲವ್ ಜಿಹಾದ್ಗೆ ತುತ್ತಾಗಿರುವ ಸಂತ್ರಸ್ತೆಯರು ಮಾಹಿತಿ ನೀಡಿದರೆ, ಅವರಿ ಅಗತ್ಯ ಸಹಾಯ ಮಾಡಲಾಗುವುದು ಎಂದು ಕಾರ್ಯಕರ್ತರು ತಿಳಿಸಿದರು. ಹಿಂದು ಯುವತಿಯರನ್ನು ಬಲೆಗೆ ಹಾಕಿಕೊಳ್ಳುತ್ತಿರುವವರ ವಿರುದ್ಧ ಎಚ್ಚರದಿಂದ ಇರುವಂತೆ ತಿಳಿಹೇಳಿದರು.
ಅಗತ್ಯ ಸಹಾಯಕ್ಕಾಗಿ ಸಹಾಯವಾಣಿ ಸಂಖ್ಯೆ 9090443444 ಗೆ ಕರೆ ಮಾಡುವಂತೆ ತಿಳಿಸಿದರು. ಇಲ್ಲಿನ ಬಿವಿಬಿ, ಪಿಸಿ ಜಾಬಿನ ಕಾಲೇಜು ಹಾಗೂ ಕನಕದಾಸ ಕಾಲೇಜುಗಳಿಗೆ ಶ್ರೀರಾಮ ಸೇನಾ ಕಾರ್ಯಕರ್ತರು ಭೇಟಿ ನೀಡಿ, ಕರಪತ್ರ ಹಂಚಿದರು. ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರು ಹಾಗೂ ಶಿಕ್ಷಕರಿಗೆ ಕರಪತ್ರ ವಿತರಿಸಿದರು.
ಶ್ರೀರಾಮ ಸೇನಾದ ಅಣ್ಣಪ್ಪ ದಿವಟಗಿ, ಮಂಜು ಕಾಟಕರ, ಬಸವರಾಜ ಗೌಡರ, ಬಸು ದುರ್ಗದ, ಗುಣಧರ ದೊಡೊತಿ, ಪ್ರವೀಣ ಮಾಳೋಧಕರ ಹಾಗೂ ಇತರರು ಈ ಸಂದರ್ಭದಲ್ಲಿ ಇದ್ದರು.
ಉತ್ತಮ ಪ್ರತಿಕ್ರಿಯೆ : ಲವ್ ಜಿಹಾದ್ನಿಂದ ಹಿಂದು ಯುವತಿಯರ ರಕ್ಷಣೆಗಾಗಿ ಶ್ರೀರಾಮ ಸೇನಾ ಕಳೆದ ಮೇ 29ರಿಂದ ಪ್ರಾರಂಭಿಸಿರುವ ಸಹಾಯವಾಣಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಕರ್ನಾಟಕ ಅಷ್ಟೇ ಅಲ್ಲದೇ, ಹೊರ ರಾಜ್ಯಗಳಿಂದಲೂ ಸಹಾಯವಾಣಿಗೆ ಕರೆ ಮಾಡುತ್ತಿರುವ ಸಂತ್ರಸ್ತೆಯರು, ಅಳಲು ತೋಡಿಕೊಳ್ಳುತ್ತಿದ್ದಾರೆ. ಇದರೊಂದಿಗೆ ಬೆದರಿಕೆ ಕರೆಗಳೂ ಬರುತ್ತಿವೆ.
ಈ ಸಹಾಯವಾಣಿಗೆ ಇದುವರೆಗೆ 1,073 ಕರೆಗಳು ಬಂದಿವೆ. ಇದರಲ್ಲಿ 197 ಮಿಸ್ಡ್ ಕಾಲ್ಗಳಿದ್ದು, 876 ಕರೆಗಳನ್ನು ಸ್ವೀಕರಿಸಲಾಗಿದೆ. ಶ್ರೀರಾಮ ಸೇನಾ ಮಾಡುತ್ತಿರುವ ಕಾರ್ಯವನ್ನು ಶ್ಲಾಘಿಸಿ 569 ಕರೆಗಳು ಬಂದಿದ್ದು, 175 ಬೆದರಿಕೆ ಕರೆಗಳು ಬಂದಿವೆ. ಹೊರ ರಾಜ್ಯದಿಂದಲೂ 23 ಕರೆಗಳು ಬಂದಿವೆ. ಲವ್ ಜಿಹಾದ್ನ ದೂರುಗಳುಳ್ಳ 109 ಕರೆಗಳು ಬಂದಿದ್ದು, ಇದರಲ್ಲಿ 64 ದೂರುಗಳನ್ನು ಶ್ರೀರಾಮ ಸೇನಾ ಮುಖಂಡರು ಹಾಗೂ ಕಾರ್ಯಕರ್ತರು ಬಗೆಹರಿಸಿದ್ದಾರೆ. 27 ದೂರುಗಳು ಬಗೆಹರಿಯುವ ಹಂತದಲ್ಲಿ ಇವೆ. 18 ದೂರುಗಳು ಬಾಕಿ ಇವೆ.
ಶ್ರೀರಾಮ ಸೇನಾ ಗೌರವ ರಾಷ್ಟ್ರೀಯ ಅಧ್ಯಕ್ಷ ಶ್ರೀ ಸಿದ್ದಲಿಂಗ ಸ್ವಾಮೀಜಿ, ರಾಷ್ಟ್ರೀಯ ಅಧ್ಯಕ್ಷ ಪ್ರಮೋದ ಮುತಾಲಿಕ ಹಾಗೂ ರಾಜ್ಯಾಧ್ಯಕ್ಷ ಗಂಗಾಧರ ಕುಲಕರ್ಣಿ ಅವರ ಮಾರ್ಗದರ್ಶನದಲ್ಲಿ ಕಾರ್ಯಕರ್ತರು ಲಬ್ಜಿಹಾದ್ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯವನ್ನು ರಾಜ್ಯಾದ್ಯಂತ ನಡೆಸುತ್ತಿದ್ದಾರೆ.