ತಿಳಿವಳಿಕೆಯೇ ಎಚ್‌ಐವಿ ಏಡ್ಸ್ ರೋಗಕ್ಕೆ ಮದ್ದು

web5
ಬೈಲಹೊಂಗಲದಲ್ಲಿ ಏಡ್ಸ್ ಜಾಗೃತಿ ಜಾಥಾಗೆ ಚಾಲನೆ ನೀಡಿದರು. ಎಂ.ಆರ್ ಮೆಳವೆಂಕಿ, ವಿ.ಜಿ. ಕಟದಾಳ, ಡಾ.ಎಸ್.ಎಸ್. ಸಿದ್ದನ್ನವರ ಇತರರು ಇದ್ದರು.
Published on

ಬೈಲಹೊಂಗಲ: ಏಡ್ಸ್ ಕುರಿತು ಜನಜಾಗೃತಿ ಅವಶ್ಯವಾಗಿದ್ದು, ತಿಳಿವಳಿಕೆ ಒಂದೇ ಅದಕ್ಕೆ ಮದ್ದು ಎಂದು ಹಿರಿಯ ದಿವಾಣಿ ನ್ಯಾಯಾಧೀಶೆ ಉಷಾರಾಣಿ ಆರ್. ಹೇಳಿದರು.

ಪಟ್ಟಣದ ಚನ್ನಮ್ಮ ಸಮಾಧಿ ಸ್ಥಳದಲ್ಲಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ನ್ಯಾಯಾಂಗ ಇಲಾಖೆ, ತಾಲೂಕು ಕಾನೂನು ಸಲಹಾ ಸಮಿತಿ ಮತ್ತು ನ್ಯಾವಾದಿಗಳ ಸಂಘ, ಸ್ಥಳಿಯ ಸಂಘ-ಸಂಸ್ಥೆಗಳು ಹಾಗೂ ಸರ್ಕಾರಿ ಮಹಿಳಾ ಪದವಿ ಮಹಾವಿದ್ಯಾಲಯ ಆಶ್ರಯದಲ್ಲಿ ವಿಶ್ವ ಏಡ್ಸ್ ದಿನಾಚರಣೆ ಪ್ರಯುಕ್ತ ಜನಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದರು.

ನ್ಯಾಯಾಧೀಶ ಮನುಶರ್ಮಾ ಎಸ್.ಪಿ., ತಾಲೂಕು ಆರೋಗ್ಯಾಧಿಕಾರಿ ಡಾ.ಎಸ್.ಎಸ್.ಸಿದ್ದನ್ನವರ, ನ್ಯಾಯವಾದಿಗಳ ಸಂಘದ ಅಧ್ಯಕ್ಷ ಎಂ.ಆರ್ ಮೆಳವೆಂಕಿ, ಡಿ.ವೈ.ಗರಗದ ಬಿಎಚ್‌ಇಒ ಎಸ್.ಎಸ್.ಮುತ್ನಾಳ ಮಾತನಾಡಿದರು.
ಆಪ್ತ ಸಮಾಲೋಚಕ ಕೆ.ಎಸ್.ಸಣ್ಣಮಾಟೊಳ್ಳಿ ಉಪನ್ಯಾಸ ನೀಡಿದರು. ನ್ಯಾಯವಾದಿಗಳ ಸಂಘದ ಕಾರ್ಯದರ್ಶಿ ವಿ.ಜಿ.ಕಟದಾಳ, ಸತೀಶ ಮಳಲಿ, ನಾಗರಾಜ ಖಾಡೆ, ಎಂ.ಐ.ಹಿತಾರಿಗೌಡ್ರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net