

ರಾಯಚೂರು ಜಾತಿ ಗಣತಿ ನಡೆಯಲು ಸಮೂದಾಯ ಸಂಘಟಕರು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಜಾತಿ ನಮೂದಿಸಲು ಮೇ.೦೧ ರಿಂದ ಜಿಲ್ಲಾಧ್ಯಂತ ಜಾಗೃತಿ ಮೂಡಿಸಲಾಗುತ್ತದೆಂದು ಮಾದಿಗ ಮೀಸಲಾತಿ ಹೋರಾಟ ಸಮಿತಿ ಸಂಚಾಲಕ ಜೆ.ಬಿ.ರಾಜು ಹೇಳಿದರು.
ನಗರದ ಪತ್ರಿಕಾ ಭವನದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಕಳೆದ ೩೫ ವರ್ಷಗಳಿಂದ ಒಳ ಮೀಸಲಾತಿಗೆ ಆಗ್ರಹಿಸಿ ರಾಜ್ಯದಲ್ಲಿ ಹೋರಾಟ ನಡೆದಿದೆ. ಕೊನೆಗೂ ತಾರ್ಕಿಕ ಅಂತ್ಯ ಕಾಣುವ ದಿನಗಳು ಸಮೀಪಿಸಿವೆ. ಮನೆ ಮನೆಗೆ ಬರುವ ಗಣತಿದಾರರಿಗೆ ಕಲಂ ೬೧ ರಲ್ಲಿ ಮಾದಿಗ ಎಂದ ನಮೂದಿಸಬೇಕಿದೆ.
ಬೇರೆ ಬೇರೆ ಉಪಜಾತಿಗಳಿಂದ ಸಮೂದಾಯ ಜನರನ್ನು ಕರೆಯಲಾಗುತ್ತಿದ್ದು ಮಾದಿಗ ಎಂದು ನಮೂದಿಸಿದರೆ ಖಚಿತ ದತ್ತಾಂಶ ಸಂಗ್ರಹಕ್ಕೆ ಸಹಕಾರಿಯಾಗುತ್ತದೆ. ಜಾತಿ ಗಣತಿ ನಡೆಯಲು ಸಮೂದಾಯ ಸಂಘಟಕರು ಗ್ರಾಮೀಣ ಪ್ರದೇಶಗಳಲ್ಲಿ ಸರಿಯಾದ ಜಾತಿ ನಮೂದಿಸಲು ಜಾಗೃತಿ ಮೂಡಿಸಲಾಗುತ್ತದೆ. ಮೇ.೧ ರಂದು ಜಾಗೃತಿ ಜಾಥಾ ನಡೆಸಲಾಗುತ್ತದೆ. ಜಿಲ್ಲೆಯ ಎಲ್ಲಾ ತಾಲೂಕ, ಹೋಬಳಿ ಕೇಂದ್ರಗಳಿಗೆ ತೆರಳಿ ಸಮೂದಾಯ ಜನರಲ್ಲಿ ಅರಿವು ಮೂಡಿಸಲಾಗುತ್ತದೆ ಎಂದರು.
ಮುಖAಡ ಎಂ.ವಿರೂಪಾಕ್ಷಿ ಮಾತನಾಡಿ, ಜಿಲ್ಲೆಯಲ್ಲಿ ನಡೆಯುವ ಜಾತಿ ಗಣತಿಯಿಂದ ಸಮೂದಾಯ ಜನರು ವಂಚಿತರಾಗದAತೆ ಎಚ್ಚರವಹಿಸಬೇಕಿದೆ. ಸಮೂದಾಯ ಜನರಿಗೆ ತಿಳುವಳಿಕೆ ನೀಡಲು ಮೇ.೧ ರಿಂದ ಪ್ರಾರಂಭವಾಗುವ ಜಾಗೃತಿ ಜಾಥಾವನ್ನು ಮಹಾನಗರ ಪಾಲಿಕೆ ಮಹಾಪೌರರಾದ ನರಸಮ್ಮ ನರಸಿಂಹಲು ಮಾಡಗಿರಿ ಉದ್ಘಾಟಿಸಲಿದ್ದಾರೆ. ನಗರ ಡಾ.ಬಿ.ಆರ್.ಅಂಬೇಡ್ಕರ್ ವೃತ್ತದಿಂದ ಪ್ರಾರಂಭವಾಗುವ ಜಾಥಾ ಜಿಲ್ಲೆಯ ಎಲ್ಲಾ ತಾಲೂಕಗಳಲ್ಲಿ ಸಂಚರಿಸಲಿದೆ ಎಂದರು.
ಈ ಸಂದರ್ಭದಲ್ಲಿ ಅಂಬಣ್ಣ ಆರೋಲಿಕರ, ನರಸಿಂಹಲು ಮಾಡಗಿರಿ, ಕೆ.ಪಿ.ಅನಿಲ್‌ಕುಮಾರ, ನರಸಪ್ಪ ಆಶಾಪುರು, ಶಂಕರಪ್ಪ ಹೊಸೂರು ಇದ್ದರು.