

ಹೊಳೆನರಸೀಪುರ: ನಾಮಫಲಕಗಳಲ್ಲಿ ಕಡ್ಡಾಯ ಕನ್ನಡ ಬಳಕೆ ಜಾರಿ ಮಾಡಲು ಪುರಸಭೆ ಆಡಳಿತ ಮುಂದಾಗಿದ್ದು, ಅಂಗಡಿಗಳಿಗೆ ಸರ್ಕಾರದ ನಿಯಮದಂತೆ ಕನ್ನಡ ಬಳಸಲು ಸೂಚನೆ ನೀಡಿದೆ.
ತಾಲೂಕು ಕಚೇರಿಯಲ್ಲಿ ನಡೆದ ಸಭೆಯಲ್ಲಿ ತಹಸೀಲ್ದಾರ್ ಅವರು ಕಟ್ಟುನಿಟ್ಟಿನ ಸೂಚನೆ ನೀಡಿದ್ದ ಹಿನ್ನೆಲೆಯಲ್ಲಿ ಪುರಸಭೆ ಸಿಬ್ಬಂದಿ ಪಟ್ಟಣದ ವ್ಯಾಪಾರಿಗಳಿಗೆ ಸೂಚನೆ ನೀಡಿದರು. ವ್ಯಾಪಾರಿಗಳು ಮಳಿಗೆಗಳ ನಾಮಫಲಕದಲ್ಲಿ ನಿಯಮದಂತೆ ಹೆಸರು ಬರೆಸಿಲ್ಲವೋ ಅಂಥವರಿಗೆ ಕನ್ನಡ ಬಳಸುವಂತೆ ಸಲಹೆ ನೀಡಿದರು. ಹಲವು ವ್ಯಾಪಾರಸ್ಥರು ನಿಯಮ ಪಾಲಿಸಲು ಮುಂದಾದರು. ಕೆಲವರು ಸಮಯ ಕೇಳಿ ಸರಿಪಡಿಸಿಕೊಳ್ಳುತ್ತೇವೆಂದು ಭರವಸೆ ನೀಡಿದರು.