ಸಿರಿಧಾನ್ಯ&ನಂದಿ ಕೃಷಿ ಉಳಿವಿಗಾಗಿ ಜಾಗೃತಿ

Awareness for Cereal & Nandi Farming Survival
ವಿಜಯಪುರದ ನಗರದ ಖಾಸಗಿ ಹೊಟೇಲ್​ನಲ್ಲಿ ಬಸವರಾಜ ಬಿರಾದಾರ ಸುದ್ದಿಗೋಷ್ಠಿ ನಡೆಸಿದರು. ಉಮೇಶ ವಂದಾಲ, ಮಲ್ಲಿಕಾರ್ಜುನ ಹಟ್ಟಿ ಇದ್ದಾರೆ.
Published on

ವಿಜಯಪುರ: ನಡೆದಾಡುವ ದೇವರೆಂದೇ ಖ್ಯಾತಿ ಪಡೆದಿದ್ದ ಲಿಂ. ಸಿದ್ಧೇಶ್ವರ ಶ್ರೀಗಳಿಗೆ ಗುರುನಮನ ಸಲ್ಲಿಸುವ ನಿಟ್ಟಿನಲ್ಲಿ ಸಿರಿಧಾನ್ಯಗಳ ಬಳಕೆ ಮತ್ತು ನಂದಿ (ಎತ್ತು) ಕೃಷಿ ಉಳಿವಿಗಾಗಿ ಜನಜಾಗೃತಿ ಯಾತ್ರೆ ಹಮ್ಮಿಕೊಳ್ಳಲಾಗಿದೆ ಎಂದು ಅಭಿಯಾನದ ರೂವಾರಿ ಬಸವರಾಜ ಬಿರಾದಾರ ತಿಳಿಸಿದರು.

ನಗರದ ಹಳ್ಳಿ ಮನೆ ಭೋಜನಾಲಯ, ಒಂಟೆತ್ತಿನ ಬಂಡಿಗಳ ಮಾಲೀಕರ ಸಂ, ಶ್ರೀಶೈಲ ಪಾದ ಯಾತ್ರಿಕರ ಸಮಿತಿಗಳ ಸಂಯುಕ್ತಾಶ್ರಯದಲ್ಲಿ ನ.15 ರಂದು ನಗರದಿಂದ ಹಳ್ಳಿಯಡೆಗೆ ನಂದಿ ಯಾತ್ರೆಯೊಂದಿಗೆ ಪಾದಯಾತ್ರೆ ಆಯೋಜಿಸಲಾಗಿದೆ ಎಂದು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ಅವರು ತಿಳಿಸಿದರು.

ನ.15ರ ಗೌರಿ ಹುಣ್ಣಿಮೆಯಂದು ಬೆಳಗ್ಗೆ 6 ಕ್ಕೆ ನಗರದ ಹಳ್ಳಿಮನೆ ಭೋಜನಾಲಯದಿಂದ ಪಾದಯಾತ್ರೆ ಆರಂಭಿಸಿ, ಮುಂದೆ ಾನ ಯೋಗಾಶ್ರಮಕ್ಕೆ ತೆರಳಿ ಪೂಜ್ಯರ ಆಶೀರ್ವಾದ ಪಡೆಯಲಾಗುವುದು. ಅಲ್ಲಿಂದ ಇಟ್ಟಂಗಿಹಾಳ, ಲೋಗಾಂವಿ, ಧನರ್ಗಿ, ಮಲಕನ ದೇವರಹಟ್ಟಿ, ಸೋಮದೇವರಹಟ್ಟಿ, ಕಳ್ಳಕವಟಗಿ ಮಾರ್ಗವಾಗಿ ಸಿದ್ಧೇಶ್ವರ ಶ್ರೀಗಳ ಜನ್ಮಸ್ಥಳವಾದ ಬಿಜ್ಜರಗಿ ಗ್ರಾಮಕ್ಕೆ ತೆರಳಿ ಅಲ್ಲಿನ ಸನ್ಯಾಸಪ್ಪನಮಠದ ದರ್ಶನ ಪಡೆದು ಸಿದ್ಧೇಶ್ವರ ಅಪ್ಪರವರ ಪೂರ್ವಾಶ್ರಮದ ಮನೆಗೆ ತಲುಪಲಿದೆ ಎಂದರು.

ಬಿಜ್ಜರಗಿಯಲ್ಲಿನ ಪೂಜ್ಯರ ಭಕ್ತರು, ಅನುಯಾಯಿಗಳು ಪ್ರತಿ ಹುಣ್ಣಿಮೆಯಂದು ಸತ್ಸಂಗ ನಡೆಸುತ್ತಾ ಬಂದಿದ್ದಾರೆ. ಪಾದಯಾತ್ರೆಯ ಗೌರಿಹುಣ್ಣಿಮೆಯಂದು ಸಂಜೆ ಕರಭಂಟನಾಳದ ಶ್ರೀಗಳ ಸಾನಿಧ್ಯದಲ್ಲಿ, ವಿಾನಿ ಡಾ. ಚಂದ್ರಶೇಖರ ಬಿರಾದಾರ ಅವರ ನೇತೃತ್ವದಲ್ಲಿ ದ್ರಾ ಬೆಳೆ ಕುರಿತು ರೈತರೊಂದಿಗೆ ಚರ್ಚೆ, ಮಾಹಿತಿ ಸಭೆ ನಡೆಯಲಿದೆ. ನಂತರ ಸತ್ಸಂಗ ಜರುಗಲಿದೆ ಎಂದು ಬಸವರಾಜ ಬಿರಾದಾರ ವಿವರಿಸಿದರು.

ಮುಖಂಡ ಉಮೇಶ ವಂದಾಲ ಮಾತನಾಡಿ, ನಶಿಸಿ ಹೋಗುತ್ತಿರುವ ಗೋ ಸಂಪತ್ತು, ರಾಸಾಯನಿಕ ರಸಗೊಬ್ಬರ ಬಳಕೆಯಿಂದ ಹಾಳಾಗುತ್ತಿರುವ ಕೃಷಿ ಭೂಮಿ ಉಳಿಸಲು ಕೈಗೊಂಡಿರುವ ಪಾದಯಾತ್ರೆಗೆ ಕೈಜೋಡಿಸುತ್ತಿದ್ದೇವೆ. ಶ್ರೀಶೈಲಗಿರಿ ಮಲಯ್ಯನ ಪಾದಯಾತ್ರೆ ಎಂದರೆ ಅದು ನಂದಿ ಪಾದಯಾತ್ರೆ ಇದ್ದಂತೆ. ಶ್ರೀಶೈಲ, ಗುಡ್ಡಾಪುರ, ಫಂಡರಪುರ ಪಾದಯಾತ್ರೆ ಕೈಗೊಳ್ಳುವ ಭಕ್ತರೆಲ್ಲರೂ ಕೃಷಿ, ರೈತನ ಉಳಿವಿಗಾಗಿ ಈ ಪವಿತ್ರ ನಂದಿಯಾತ್ರೆಯಲ್ಲಿ ಪಾಲ್ಗೊಳಬೇಕೆಂದು ಮನವಿ ಮಾಡಿದರು.

ಹಳ್ಳಿಮನೆ ಭೋಜನಾಲಯದ ಮಾಲೀಕ ಮಲ್ಲಿಕಾರ್ಜುನ ಹಟ್ಟಿ ಮಾತನಾಡಿ, ಅಮೇರಿಕಾದಲ್ಲಿ 15 ವರ್ಷಗಳ ಕಾಲ ಸಾಫ್ಟ್​ವೇರ್​ ಉದ್ಯೋಗಿಯಾಗಿದ್ದೆ. ಸ್ವದೇಶ ಅಭಿಮಾನದಿಂದಾಗಿ ಹುಟ್ಟೂರಿಗೆ ಮರಳಿ ಪ್ರಕೃತಿ, ಕೃಷಿಯನ್ನು ಬಹಳ ಪ್ರೀತಿಸುತ್ತಿದ್ದ ಸಿದ್ಧೇಶ್ವರ ಅಪ್ಪರವರ ಪ್ರೇರಣೆ ಪಡೆದು ಆರೋಗ್ಯಪೂರ್ಣ ಸಿರಿಧಾನ್ಯ ಸಂಪತ್ತು ಉಳಿಸಿ, ಬೆಳೆಸುವ ನಿಟ್ಟಿನಲ್ಲಿ ನಿರಂತರ ಕಾರ್ಯಕ್ರಮ ರೂಪಿಸುತ್ತಿರುವುದಾಗಿ ತಿಳಿಸಿದರಲ್ಲದೇ, ಈ ಪಾದಯಾತ್ರೆಗೆ ಸಂಪೂರ್ಣ ಸಹಕಾರ ನೀಡುವುದಾಗಿ ತಿಳಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net